ಗೋವಾ:ಗೋವಾ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಕರವೇ ಕಾರ್ಯ ಶ್ಲಾಘನೀಯ : ಸಿದ್ದಣ್ಣ ಮೇಟಿ
ಗೋವಾ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಕರವೇ ಕಾರ್ಯ ಶ್ಲಾಘನೀಯ : ಸಿದ್ದಣ್ಣ ಮೇಟಿ
ನಮ್ಮ ಬೆಳಗಾವಿ ಇ – ವಾರ್ತೆ, ವಾಸ್ಕೋ ( ದಾಬೋಲಿಂ) ಜೂ 27 :
ಗೋವಾ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಕರವೇ ಕಾರ್ಯ ಶ್ಲಾಘನೀಯವಾಗಿದೆ ಎಂದು ಅಖಿಲ ಗೋವಾ ಕನ್ನಡ ಮಹಾ ಸಂಘದ ಗೌರವಾಧ್ಯಕ್ಷ , ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿದರು
ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ವತಿಯಿಂದ ಗೋವಾ ರಾಜ್ಯದ ದಾಬೋಲಿಂನ ಅವರ ಗೃಹ ಕಛೇರಿಯಲ್ಲಿ ಹಮ್ಮಿಕೊಂಡ ಅವರ ಅಭಿನಂದನಾ ಸಮಾರಂಭದಲ್ಲಿ ಕರವೇ ಕಾರ್ಯಕರ್ತರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
2004 ರಿಂದ ನಿರಂತರವಾಗಿ ಗೋವಾ ರಾಜ್ಯದ ಕನ್ನಡಿಗರ ಸಮಸ್ಯೆಗಳಿಗೆ ಸ್ವಂದಿಸಿ ಗೋವಾದಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಸಹಕರಿಸುತ್ತಿರುವ ಕರವೇಯ ಕನ್ನಡ ಅಭಿಮಾನವನ್ನು ಮೆಚ್ಚುವಂತಹದು, ಕನ್ನಡಿಗರು ಇದ್ದಾರೆ ಎಂಬ ಅಭಿಮಾನದಿಂದ ದೂರದ ಕರ್ನಾಟಕದಿಂದ ಬಂದು ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಇವರ ಸೇವೆ ಹೀಗೆಯೆ ಮುಂದುವರೆಯಲ್ಲಿ ಎಂದು ಹಾರೈಸಿದರು.
ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಕಳೆದ 5 ದಶಕಗಳಿಂದ ಗೋವಾ ರಾಜ್ಯದಲ್ಲಿ ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿದ್ದಣ್ಣ ಮೇಟಿಯವರ ಕನ್ನಡ ಸೇವೆ ಪ್ರಶಂಶನೀಯ ಅವರ ಕನ್ನಡ ಸೇವೆಗೆ ಕರವೇ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಿ ಅವರ ಹೆಗಲಿಗೆ ಹೆಗಲು ಕೊಟ್ಟು ಕಾರ್ಯಮಾಡಲು ಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಕರವೇ ವತಿಯಿಂದ ಮೇಟಿ ದಂಪತಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ಶ್ರೀಮತಿ ನಿಲಮ್ಮಾ ಮೇಟಿ, ಜುವಾರಿ ನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಶಿಕ್ಷಕ ಯಲಾಲಿಂಗೇಶ್ವರ ತಾಳಿಕೋಟಿ, ಮುಖಂಡರಾದ ಸಾದಿಕ ಹಲ್ಯಾಳ, ದೀಪಕ ಹಂಜಿ, ಮುಗುಟ ಪೈಲವಾನ , ಮಹಾದೇವ ಮಕ್ಕಳಗೇರಿ, ಭರಮಣ್ಣ ಕಟ್ಟಿಮನಿ, ರಾಮ ಕುಡ್ಡೆಮ್ಮಿ, ಇಸಾಕ ಶಿರೂರು, ರಮಜಾನ ಅಂಡಗಿ, ಸುಲ್ತಾನ್ ನಧಾಪ, ಕಾಂತು ದಳವಾಯಿ ಉಪಸ್ಥಿತರಿದ್ದರು