ಗೋಕಾಕ:ಬೈಕ್ ಕಳ್ಳರ ಬಂಧನ: 2.5 ಲಕ್ಷ ಮೌಲ್ಯದ ಬೈಕ್‌ಗಳು ವಶ!
ಬೈಕ್ ಕಳ್ಳರ ಬಂಧನ: 2.5 ಲಕ್ಷ ಮೌಲ್ಯದ ಬೈಕ್‌ಗಳು ವಶ!
ನಮ್ಮ ಬೆಳಗಾವಿ ಇ – ವಾರ್ತೆ, ಜೂ 29 :
ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಜೂ.28 ರಂದು ನಗರದ ನಾಕಾ ನಂ 1 ರ ಹತ್ತಿರ ಸಂಶಯಾಸ್ಪದವಾಗಿ ಸೈಕಲ್ ಮೇಲೆ ಸಂಚರಿಸುತ್ತಿದ್ದಾಗ ಪೊಲೀಸರು ಬಂಧಿಸಿ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧಿತರು ತಪ್ಪೋಪ್ಪಿಕೊಂಡಿದ್ದಾರೆ. ಇವರಿಂದ
2.50 ಲಕ್ಷ ರೂ.ಮೌಲ್ಯದ ಒಟ್ಟು ಆರು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗೋಕಾಕ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.