ಗೋಕಾಕ :ಉದಯಪುರ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರ ಪ್ರತಿಭಟನೆ
ಉದಯಪುರ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 30 :
ಇಲ್ಲಿಯ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ರಾಜಸ್ಥಾನದ ಉದಯಪುರದಲ್ಲಿ ತಾಲಿಬಾನಿ ಉಗ್ರರಿಂದ ನಡೆದ ಹತ್ಯೆಯನ್ನು ಖಂಡಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸಂಘಟನೆಯ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಮೆರವಣಿಗೆ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.
ದೇಶದಲ್ಲಿ ಜನರಲ್ಲಿ ಭಯ ಆತಂಕ ಹುಟ್ಟಿಸುತ್ತಿರುವ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಉದಯಪುರದಲ್ಲಿನ ಜಿಹಾದಿ ಭಯೋತ್ಪಾದಕರು ಮಾಡಿದ ನಿರಪರಾಧಿ ಅಮಾಯಕರ ಹತ್ಯೆಯನ್ನು ಖಂಡಿಸಿ ಅಪರಾಧಿಗಳ ಕಠಿಣ ಕ್ರಮ ಜರುಗಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಬರಲಿರುವ ಬಕ್ರೀದ್ ಹಬ್ಬದ ನಿಮಿತ್ತ ನಡೆಯ ಬಹುದಾದ ಕಳ್ಳ ಗೋ ಸಾಗಾಣಿಕೆಗೆ ಹಾಗೂ ಗೋ ಹತ್ಯೆಯನ್ನು ನಿರ್ಬಂಧಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರುಗಳಾದ ನಾರಾಯಣ ಮಠಾಧೀಕಾರಿ, ಸದಾಶಿವ ಗುದ್ದಗಗೋಳ, ಲಕ್ಷ್ಮಣ ಮಿಸಾಳೆ, ಮಂಜು ಪ್ರಭುನಟ್ಟಿ ಸೇರಿದಂತೆ ಅನೇಕರು ಇದ್ದರು.