RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಅಂಧರಿಗೆ ದೃಷ್ಟಿ ಭಾಗ್ಯ ಕಲ್ಪಿಸುವಂತ ಹಲವು ಸಮಾಜಮುಖಿ ಕಾರ್ಯಗಳನ್ನು ಲಾಯನ್ಸ ಸಂಸ್ಥೆ ಮಾಡುತ್ತಿದೆ : ಅವಿನಾಶ್ ಅಸುದೆ

ಗೋಕಾಕ:ಅಂಧರಿಗೆ ದೃಷ್ಟಿ ಭಾಗ್ಯ ಕಲ್ಪಿಸುವಂತ ಹಲವು ಸಮಾಜಮುಖಿ ಕಾರ್ಯಗಳನ್ನು ಲಾಯನ್ಸ ಸಂಸ್ಥೆ ಮಾಡುತ್ತಿದೆ : ಅವಿನಾಶ್ ಅಸುದೆ 

ಅಂಧರಿಗೆ ದೃಷ್ಟಿ ಭಾಗ್ಯ ಕಲ್ಪಿಸುವಂತ ಹಲವು ಸಮಾಜಮುಖಿ ಕಾರ್ಯಗಳನ್ನು ಲಾಯನ್ಸ ಸಂಸ್ಥೆ ಮಾಡುತ್ತಿದೆ : ಅವಿನಾಶ್ ಅಸುದೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 11:
ಅಂಧರಿಗೆ ದೃಷ್ಟಿ ಭಾಗ್ಯ ಕಲ್ಪಿಸುವದರೊಂದಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಲಾಯನ್ಸ ಸಂಸ್ಥೆ ಮಾಡುತ್ತಿದೆ ಎಂದು ಕೆವ್ಹಿಜಿ ಬ್ಯಾಂಕನ ಸಹಾಯಕ ಪ್ರಧಾನ ವ್ಯವಸ್ಥಾಪಕ ಅವಿನಾಶ ಅಸುದೆ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ಲಾಯನ್ಸ ಸಂಸ್ಥೆ ಹಮ್ಮಿಕೊಂಡ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು .

104 ವರ್ಷ ಇತಿಹಾಸ ಉಳ್ಳ ಲಾಯನ್ಸ ಸಂಸ್ಥೆಯು ದೇಶದಲ್ಲಿ ಹಲವಾರು ಮಹತ್ತರ ಬದಲಾವಣೆಗೆ ನಾಂದಿಯಾಗಿದೆ. ಸಮಾಜದಲ್ಲಿಯ ಅಭಲೆಯರನ್ನು ಸಭಲೆಯರನ್ನಾಗಿ ಮಾಡುವಲ್ಲಿ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡಿದೆ. ದೇಶದಲ್ಲಿ ನೇತ್ರ ಹಿನರನ್ನು ಹುಡುಕಿ ಅವರಿಗೆ ದೃಷ್ಟಿಯನ್ನು ನೀಡುವ ಮಹತ್ತರ ಕಾರ್ಯಗಳು ಲಾಯನ್ಸ ಸಂಸ್ಥೆಯಿಂದ ಜರುಗುತ್ತಿವೆ‌ ಇದು ಅತ್ಯಂತ ಹೆಮ್ಮೆ ಪಡುವ ವಿಷಯವಾಗಿದೆ. ಇಂತಹ ಹತ್ತಾರು ಸಾಮಾಜಿಕ ಕಳ್ಳಕಳಿಯ ಕಾರ್ಯಗಳನ್ನು ಲಾಯನ್ಸ ಸಂಸ್ಥೆ ಮಾಡಿ ಸಮಾಜದಲ್ಲಿ ಬಿದ್ದವರನ್ನು ಮೇಲೆತ್ತುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದ ಅವರು ಈ ಸಂಸ್ಥೆಗೆ ನಾನು ನೂತನವಾಗಿ ಸದಸ್ಯತ್ವ ಪಡೆದಿರುವುದು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಲಾಯನ್ಸ ಸಂಸ್ಥೆಯ ಕಾರ್ಯವೈಖರಿಯನ್ನು ಕೊಂಡಾಡಿದರು.
ನೂತನ ಅಧ್ಯಕ್ಷ ಅಶೋಕ್ ಮುರಗೋಡ ಮಾತನಾಡಿ ಈಗಾಗಲೇ ಲಾಯನ್ಸ ಸಂಸ್ಥೆ ವತಿಯಿಂದ ಉಚಿತ ನೇತ್ರ ತಪಾಸಣೆ ಆಸ್ಪತ್ರೆ ಪ್ರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ 10 ಹಾಸಿಗೆ ಸುಸಜ್ಜಿತ ಆಸ್ಪತ್ರೆ , ಶಸ್ತ್ರ ಚಿಕಿತ್ಸೆ ಸೇರಿದಂತೆ ಇತರ ಆರೋಗ್ಯ ಸೇವೆಗಳನ್ನು ಮಾಡುವ ಉದ್ದೇಶ ಲಾಯನ್ಸ ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವ ಕುಮಾರೆಂದ್ರ ಮಹಾಸ್ವಾಮಿಗಳು ಪರೋಪಕಾರ ಮಾಡುವ ಉದ್ದೇಶ ಲಾಯನ್ಸ ಸಂಸ್ಥೆ ಹೊಂದಿದೆ. ಮಾನವ ಇದ್ದಾಗ ಧಾನ, ಧರ್ಮ ಮಾಡಬೇಕು‌ ಪರರಿಗೆ ಉಪಾಕಾರ ಮಾಡಬೇಕು. ಜೀವನಕ್ಕೆ ಶಾಂತಿ ನೆಮ್ಮದಿ ತೃಪ್ತಿ ಬೇಕೆಂದರೆ ಪರೋಪಕಾರ ಮಾಡಬೇಕು. ಲಾಯನ್ಸ ಸಂಸ್ಥೆ ಪರೋಪಕಾರ ಕಾರ್ಯ ಮಾಡಿ ಒಳ್ಳೆಯ ಸಮಾಜಿಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಮತ್ತೊಬ್ಬರ ಕಲ್ಯಾಣಕ್ಕಾಗಿ ಕಾರ್ಯ ಮಾಡಿದಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲ್ಲಿಕ್ಕೆ ಸಾಧ್ಯ . ಭೂಲೋಕದಲ್ಲಿಯಿಂದಲೆ ಸ್ವರ್ಗಕ್ಕೆ ಹೋಗುವ ದಾರಿ ಮಾಡಿಕೊಳ್ಳು ದಿಸೆಯಲ್ಲಿ ಮಾನವ ಬದುಕಬೇಕು. ಜಾತಿ ಧರ್ಮ ಸಮಾಜ ಸೇವೆಯಲ್ಲಿ ಮಧ್ಯೆ ಬರಬಾರದು. ಜಾತಿ ಧರ್ಮ ವನ್ನು ಬದಿಗೋತ್ತಿ ಕಾರ್ಯ ಮಾಡಬೇಕು. ಇಂತಹ ಕಾರ್ಯಗಳನ್ನು ಲಾಯನ್ಸ ಸಂಸ್ಥೆ ಮಾಡುತ್ತಿದ್ದೆ ಈ ಸಂಸ್ಥೆಯಿಂದ ಮತ್ತಷ್ಟು ಸತ್ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯವನ್ನು ಜಿಲ್ಲಾ ಉಪ ಪ್ರಾಂತಪಾಲ ಮನೋಜ್ ಮನೆಕ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಗುರುದೇವ ಸಿದ್ದಾಪುರಮಠ, ಲಾಯನ್ಸ ಕಾರ್ಯದರ್ಶಿ ಮಹೇಂದ್ರ ಪೋರವಾಲ, ಖಜಾಂಚಿ ಅಶ್ವಿನ್ ರಾಠೋಡ, ಸತೀಶ ಜೋಶಿ, ಪುರುಷೋತ್ತಮ ಬಾಫನಾ, ಉಪಸ್ಥಿತರಿದ್ದರು.

Related posts: