RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನಮ್ಮ ಬೆಳಗಾವಿ ವರದಿ ಫಲಶೃತಿ : ಗೋಡಚಿನಮಲ್ಕಿ ಜಲಪಾತದ ಅಂಚಿಗೆ ಬ್ಯಾರಿಗೇಟ್ ನಿರ್ಮಿಸಿದ ಪೊಲೀಸ್ ಅಧಿಕಾರಿಗಳು

ಗೋಕಾಕ:ನಮ್ಮ ಬೆಳಗಾವಿ ವರದಿ ಫಲಶೃತಿ : ಗೋಡಚಿನಮಲ್ಕಿ ಜಲಪಾತದ ಅಂಚಿಗೆ ಬ್ಯಾರಿಗೇಟ್ ನಿರ್ಮಿಸಿದ ಪೊಲೀಸ್ ಅಧಿಕಾರಿಗಳು 

ನಮ್ಮ ಬೆಳಗಾವಿ ವರದಿ ಫಲಶೃತಿ : ಗೋಡಚಿನಮಲ್ಕಿ ಜಲಪಾತದ ಅಂಚಿಗೆ ಬ್ಯಾರಿಗೇಟ್ ನಿರ್ಮಿಸಿದ ಪೊಲೀಸ್ ಅಧಿಕಾರಿಗಳು

 
ನಮ್ಮ ಬೆಳಗಾವಿ ಇ – ವಾರ್ತೆ, ಜು 12 :

 

 

ನದಿ ದಡಕ್ಕೆ ಹೋಗದಂತೆ ಗೋಡಚಿನಮಲ್ಕಿ ಬ್ಯಾರಿಗೇಟ್ ನಿರ್ಮಿಸಿರುವ ಗೋಕಾಕ ಗ್ರಾಮೀಣ ಠಾಣಾ ಪೊಲೀಸರು

ಗೋಡಚಿನಮಲ್ಕಿ ಜಲಪಾತಕ್ಕೆ ಮಂಗಳವಾರದಂದು ಗೋಕಾಕ ಗ್ರಾಮೀಣ ಪಿಎಸ್ಐ ನಾಗರಾಜ್ ಕಿಲಾರೆ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಗೋಡಚಿನಮಲ್ಕಿ ಜಲಪಾತದಲ್ಲಿ ಪ್ರವಾಸಿಗರ ಕಿರಿಕಿರಿ ಉಂಟುಮಾಡುತ್ತಿರುವ ಬಗ್ಗೆ ನಮ್ಮ ಬೆಳಗಾವಿ ಇ- ವಾರ್ತೆ ಸೋಮವಾರದಂದು ” ಪೊಲೀಸರ ಸರ್ಪಗಾವಲಿನ ಮಧ್ಯೆಯೂ ನಿಲ್ಲದ ಪ್ರವಾಸಿಗರ ತುಂಟಾಟ ” ಎಂಬ ಶೀರ್ಷಿಕೆಯಡಿ ವರದಿ ಬರೆದಿತ್ತು.

ಗೋಕಾಕ ತಾಲ್ಲೂಕಿನ ಗೋಡಚಿನಮಲ್ಕಿ ಜಲಪಾತ ತುಂಬಿ ಹರಿಯುತ್ತಿದ್ದು, ದಿನ ನಿತ್ಯ ಪ್ರವಾಸಿಗರ ದಂಡು ಈ ಜಲಪಾತವನ್ನು ವಿಕ್ಷೀಸಲು ಸಮುದ್ರೋಪಾಯವಾಗಿ ಜನರು ಬರುತ್ತಿದ್ದಾರೆ ಹೀಗೆ ಬಂದ ಪ್ರವಾಸಿಗರು ಜಲಪಾತವನ್ನು ಅದರ ಅಂಚಿಗೆ ಹೋಗಿಯೇ ವಿಕ್ಷೀ‌ಸಿ ಸೆಲ್ಫಿಗೆ ಪೋಸ್ ನೀಡುತ್ತಿದ್ದರು ಇದರ ಬಗ್ಗೆ ಪತ್ರಿಕೆ ಸಮಗ್ರ ವರದಿ ಬರೆದಿತ್ತು.
ಇದರಿಂದ ಎಚ್ಚೆತ್ತುಕೊಂಡ ಪೊಲೀಸ ಅಧಿಕಾರಿಗಳು ಮಂಗಳವಾರದಂದು ಗೋಡಚಿನಮಲ್ಕಿ ಜಲಪಾತಕ್ಕೆ ಭೇಟಿ ನೀಡಿ ಜಲಪಾತದ ಅಂಚಿಗೆ ಪ್ರವಾಸಿಗರು ಹೋಗದಂತೆ ತಾತ್ಕಾಲಿಕ ಬ್ಯಾರಿಗೇಟ್ ನಿರ್ಮಿಸಿ ಅಲ್ಲ ಬರುವ ಪ್ರವಾಸಿಗರನ್ನು ಸೆರಿಸಿ ತಿಳಿ ಹೇಳಿದ್ದಾರೆ‌.

ಗೋಡಚಿನಮಲ್ಕಿ ಜಲಪಾತ ವಿಕ್ಷೀಸಲು ಆಗಮಿಸಿರುವ ಪ್ರವಾಸಿಗರೆ ತಿಳಿ ಹೇಳುತ್ತಿರುವ ಪಿಎಸ್ಐ ನಾಗರಾಜ ಕಿಲಾರೆ

ಈ ಸಂದರ್ಭದಲ್ಲಿ ಪ್ರವಾಸಿಗರನ್ನು ಉದ್ದೇಶಿಸಿ ಮಾತನಾಡಿರುವ ಗೋಕಾಕ ಗ್ರಾಮೀಣ ಠಾಣೆಯ ಪಿಎಸ್ಐ ನಾಗರಾಜ್ ಕಿಲಾರೆ ಅವರು ಪ್ರವಾಸಕ್ಕೆ ಬರುವವರು ತಮ್ಮ ಹಾಗೂ ತಮ್ಮ ಮಕ್ಕಳ ಬಗ್ಗೆ ಸುರಕ್ಷಿತೆಗೆ ಹೆಚ್ಚಿನ ಒತ್ತು ನೀಡಿ ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕು‌. ಬೆಳಗಾವಿ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳು ಇವೆ. ಅವುಗಳ ನೋಡಿ ಆಸ್ವಾದಿಸುವ ಜೊತೆಗೆ ತಮ್ಮ ಜೀವದ ಕಡೆಗೂ ಗಮನ ಹರಿಸಿಬೇಕು. ಗೋಡಚಿನಮಲ್ಕಿ ಜಲಪಾತದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರವಾಸಿಗರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ವಿನಂತಿಸಿದ್ದಾರೆ.

Related posts: