ಮೂಡಲಗಿ: ಹೊಸ ತಾಲೂಕಿಗೆ ಹೆಚ್ಚಿದ ಒತ್ತಾಯ : ತೀವ್ರ ಗೊಂಡ ಹೋರಾಟ
ಮೂಡಲಗಿ ಹೊಸ ತಾಲೂಕಿಗೆ ಹೆಚ್ಚಿದ ಒತ್ತಾಯ : ತೀವ್ರ ಗೊಂಡ ಹೋರಾಟ
ಮೂಡಲಗಿ ಅ 2: ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣವನ್ನು ನೂತನ ತಾಲೂಕ ಪಟ್ಟಿಯಿಂದ ಕೈ ಬಿಟ್ಟಿದನ್ನು ಖಂಡಿಸಿ ಕಳೆದ ಸುಮಾರು 25 ದಿನಗಳಿಂದ ನಡೆಯುತ್ತಿರುವ ಹೋರಾಟ ಮತಷ್ಟು ಚುರುಕುಗೊಂಡಿದೆ
ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡೋವರೆಗೂ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಸೋಮವಾರ ಗಾಂಧಿ ಜಯಂತಿ ಆಚರಣೆ ಬಳಿಕ ಮೂಡಲಗಿ ಸೇರಿದಂತೆ ಸುತ್ತಲಿನ ಎಂಟು ಗ್ರಾಮಗಳಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಬಸ್ ಸಂಚಾರ, ಖಾಸಗಿ ವಾಹನ ಸಂಚಾರ ಕೂಡ ಸಂಪೂರ್ಣ ಸ್ತಬ್ಧವಾಗಿದೆ.
ಗೋಕಾಕದಿಂದಲೂ ಸಹ ಈ ಹೋರಾಟವನ್ನು ಬೆಂಬಲಿಸಿ ನಗರದ ಯುವಕರು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಅವರ ನೇತೃತ್ವದಲ್ಲಿ ಗೋಕಾಕ ಕೊಳವಿ ಹಣಮಂತ ಗುಡಿಯಿಂದ ಮೂಲಡಗಿವರೆಗೆ ಸೋಮವಾರ ಬೈಕ್ ರ್ಯಾಲಿ ನಡೆಸಿದರು