RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ಪತ್ರವನ್ನು ಸಾಂವಿಧಾನಿಕ ಕರ್ತವ್ಯದಡಿ ರಾಜ್ಯ ಸರ್ಕಾರ ವಿತರಿಸಬೇಕು : ಡಾ.ಸಂಜಯ ಹೊಸಮಠ

ಗೋಕಾಕ:ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ಪತ್ರವನ್ನು ಸಾಂವಿಧಾನಿಕ ಕರ್ತವ್ಯದಡಿ ರಾಜ್ಯ ಸರ್ಕಾರ ವಿತರಿಸಬೇಕು : ಡಾ.ಸಂಜಯ ಹೊಸಮಠ 

ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ಪತ್ರವನ್ನು ಸಾಂವಿಧಾನಿಕ ಕರ್ತವ್ಯದಡಿ ರಾಜ್ಯ ಸರ್ಕಾರ ವಿತರಿಸಬೇಕು : ಡಾ.ಸಂಜಯ ಹೊಸಮಠ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 13 :

 

ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ಪತ್ರವನ್ನು ಸಾಂವಿಧಾನಿಕ ಕರ್ತವ್ಯದಡಿ ರಾಜ್ಯ ಸರ್ಕಾರ ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಡಾ.ಸಂಜಯ ಹೊಸಮಠ ಹೇಳಿದರು

ಬುಧವಾರದಂದು ನಗರದ ಮುಪ್ಪಯ್ಯನ ಮಠದಲ್ಲಿ ಕರೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬೇಡ ಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಲು ಹೊರಟಿದೆ. ಆ ಮೂಲಕ ಸಂವಿಧಾನಕ್ಕೆ ಸಂವಿಧಾನ ಶಿಲ್ಪಿಗೆ ಅಪಚಾರ ಎಸಗುತ್ತಿರುವುದು ಖೇದನೀಯ. ಬೇಡ ಜಂಗಮ ಪ್ರಮಾಣಪತ್ರ ವಿತರಣೆ ವಿಚಾರವಾಗಿ ಸಮಾಜದ ಹಿರಿಯ ನಾಯಕ ಬಿ.ಡಿ. ಹಿರೇಮಠ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಪ್ರತಿಪಾದನಾ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ ಅದನ್ನು ಬೆಂಬಲಿಸಿ ಗೋಕಾಕ ಘಟಕದಿಂದ ಜು 20 ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು ತಾಲೂಕಿನಿಂದ 500 ಜನ ಸಮಾಜ ಭಾಂಧವರು ಪಾಲ್ಗೋಳುವರು.

ಈಗಾಗಲೇ ರಾಜ್ಯ ಸರಕಾರವು ಆಹಾರ ಪದ್ಧತಿ, ಆಚಾರ, ವಿಚಾರ ಸೇರಿದಂತೆ ನಾನಾ ಅಂಶಗಳನ್ನು ಮುಂದಿರಿಸಿಕೊಂಡು ಬೇಡ ಜಂಗಮರನ್ನು ಗುರುತಿಸುವ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ.ಈ ಬಗ್ಗೆ ಡಾ.ಸ್ವಾಮಿನಾಥನ್‌ ಕಾಮತ್‌ ಅವರ ಆಯೋಗವು ಸಮಗ್ರ ಅಧ್ಯಯನ ನಡೆಸಿ ವೀರಶೈವ ಧರ್ಮದ ಅನುಯಾಯಿಗಳಾದ ಜಂಗಮರೇ ಬೇಡ ಜಂಗಮರೆಂದು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆಂದು ತಿಳಿಸಿದರು.
ಅದೇ ರೀತಿ ರಾಜ್ಯ ಉಚ್ಚ ನ್ಯಾಯಾಲಯವು ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ  ನೀಡಿಕೆ ವಿರೋಧಿಸಿ ದಾಖಲಾಗಿದ್ದ ಪ್ರಕರಣವನ್ನು 1995ರಲ್ಲಿಯೇ ತಿರಸ್ಕರಿಸಿದೆ. ಈ ನಂತರ ರಾಜ್ಯದ ಹೈ.ಕ.ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಬೇಡ ಜಂಗಮರಿದ್ದಾರೆಂದು ಜನಗಣತಿಯಲ್ಲಿ ಗೊತ್ತಾಗಿದೆ. ಆದರೂ ಜಿಲ್ಲೆಯಲ್ಲಿ ಅಧಿಕಾರಿಗಳು ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ಕಂಬಿ, ಮಹೇಶ ಮುಚ್ಚಂಡಿಹಿರೇಮಠ, ಎಂ.ಜಿ.ಹಿರೇಮಠ, ಸಂಜಯ ಪೂಜಾರಿ, ಜಗದೀಶ್ ನಿರ್ವಾಣಿ, ಸಂಗಮೇಶ ಗೂಡದೂರ ಕಲ್ಮಠ, ವಿನಾಯಕ ಹಿರೇಮಠ, ಈರಣ್ಣ ಹಿರೇಮಠ, ಐ.ಬಿ.ಮುಚ್ಚಂಡಿ ಹಿರೇಮಠ , ಪಂಚಾಕ್ಷರಿ ಹೊಸಟ್ಟಿಮಠ, ಬಸವರಾಜ ಮುಚ್ಚಂಡಿ ಹಿರೇಮಠ ಉಪಸ್ಥಿತರಿದ್ದರು.

Related posts: