RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು

ಗೋಕಾಕ:ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು 

ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 14 :

ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ ಎಂದು ನದಿ ಇಂಗಳಗಾವನ ಗುರುಲಿಂಗ ದೇವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ – ಮಂಥನ ವೇದಿಕೆ ಸಂಯುಕ್ತಾಶ್ರಯದಲ್ಲಿ  ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ 155ನೇ ಶಿವಾನುಭವಗೋಷ್ಠಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಅವರು ಮಾತನಾಡಿದರು.

ಅಂತಃಕರುಣ ಶುದ್ಧವಿದ್ದರೆ ಮಾತ್ರ ಗುರುಕೃಪೆಯಾಗಲು ಸಾಧ್ಯ.  ಮನುಷ್ಯ ಸತ್ಕಾರ್ಯಗಳನ್ನು ಮಾಡಬೇಕು. ಶಾಸ್ತ್ರ ಓದಿ, ಪುರಾಣ ಕೇಳಿದ ಮಾತ್ರಕ್ಕೆ ಒಳ್ಳೆಯ ಮನುಷ್ಯನಾಗಲು ಸಾಧ್ಯವಿಲ್ಲ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಒಬ್ಬ ಒಳ್ಳೆಯ ಪ್ರಜ್ಞೆಯಾಗಲಿಕ್ಕೆ ಸಾಧ್ಯ ಆ ದಿಸೆಯಲ್ಲಿ ಪ್ರತಿಯೊಬ್ಬರೂ ಸತ್ಕಾರ್ಯಗಳನ್ನು ಮಾಡಿ ಗುರುವಿನ ಮಾರ್ಗದಲ್ಲಿ ನಡೆದು ಸದೃಢ ಸಾಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಅತ್ಯಂತ ಪ್ರಮುಖ ಸ್ಥಾನ ಇರುತ್ತದೆ. ನಮ್ಮನ್ನು ತಿದ್ದಿ, ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡುವ ಗುರು ಪ್ರತಿಯೊಬ್ಬರಿಗೂ ಬಹಳ ಮುಖ್ಯ.ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಬದುಕು ಪಾವನ ಎಲ್ಲರೂ ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗದುಗಿನ ಪಂಚಾಕ್ಷರಿ ಹಿರೇಮಠ ತಂಡವದರು ಸಂಗೀತ ಸೇವೆ ನೀಡಿದರು.
ವೇದಿಕೆಯಲ್ಲಿ  ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ರೊಟ್ಟಿ, ಸುಮಿತ್ರಾ ಗುರಾಣಿ, ಶಕುಂತಲಾ ಕಾಪಸಿ, ನಾಗಪ್ಪ ಕಾಪಸಿ, ಎಸ್.ಎಸ್.ಮರೆನ್ನವರ ಇದ್ದರು.
ಕಾರ್ಯಕ್ರಮವನ್ನು  ಭಾವನಾ ಹಣುಮಂತಗೋಳ ನಿರೂಪಿಸಿದರು, ಆರ್.ಎಲ್.ಮಿರ್ಜಿ ಸ್ವಾಗತಿಸಿದರು, ಎಸ್.ಕೆ ಮಠದ ವಂದಿಸಿದರು.

Related posts: