ಗೋಕಾಕ:ಸನ್ 2021-22ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಒಟ್ಟು 1908 ಮನೆಗಳು ಮಂಜೂರು : ಗ್ರಾಪಂ ಸದಸ್ಯ ಸುರೇಶ ಸನದಿ
ಸನ್ 2021-22ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಒಟ್ಟು 1908 ಮನೆಗಳು ಮಂಜೂರು : ಗ್ರಾಪಂ ಸದಸ್ಯ ಸುರೇಶ ಸನದಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 23 :
ಗೋಕಾಕ ಕ್ಷೇತ್ರಕ್ಕೆ ಗುಡಿಸಲು ಮುಕ್ತ ಮಾಡಲು ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಸನ್ 2021-22ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಒಟ್ಟು 1908 ಮನೆಗಳು ಮಂಜೂರಾಗಿವೆ ಎಂದು ಮಮದಾಪೂ ಗ್ರಾಪಂ ಸದಸ್ಯ ಹಾಗೂ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ತಿಳಿಸಿದ್ದಾರೆ.
ಈಗಾಗಲೇ ಗೋಕಾಕ ಮತಕ್ಷೇತ್ರದ ಗ್ರಾಮ ಪಂಚಾಯತಗಳಲ್ಲಿ ಕಡು ಬಡವರನ್ನು ಗುರುತಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ವಸತಿ ಯೋಜನೆಯಲ್ಲಿ ಹಕ್ಕು ಪತ್ರ ವಿತರಿಸಲಾಗಿದೆ.
ಗೋಕಾಕ ಮತಕ್ಷೇತ್ರದ ಗ್ರಾಮ ಪಂಚಾಯತ ಮತ್ತು ಪಟ್ಟಣ ಪಂಚಾಯತಗಳಲ್ಲಿ ವಾಜಪೇಯಿ ವಸತಿ ಯೋಜನೆಯಡಿ 1485 ಮತ್ತು ಅಂಬೇಡ್ಕರ ವಸತಿ ಯೋಜನೆಯಡಿಯಲ್ಲಿ 423 ಒಟ್ಟು 1908 ಮನೆಗಳನ್ನು ಮಂಜೂರು ಮಾಡಿ ಮನೆಗಳ ಹಕ್ಕು ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.