RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ : ಜಯಾನಂದ ಮಾದರ

ಗೋಕಾಕ:ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ : ಜಯಾನಂದ ಮಾದರ 

ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ : ಜಯಾನಂದ ಮಾದರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 31 :

ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ. ಗಾಯನ, ಸ್ವರ, ತಾಳ ಹಾಗೂ ಧ್ವನಿ ಸಂಗೀತದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಇವುಗಳ ಮೇಲೆ ಹಿಡಿತ ಸಾಧಿಸಿದ ವ್ಯಕ್ತಿ ಶ್ರೇಷ್ಠ ಕಲಾವಿದನಾಗಿ ಹೊರಹೊಮ್ಮಲು ಸಾಧ್ಯ ಎಂದು ಲಲಿತ ಕಲಾ ಅಕ್ಯಾಡಮಿ ಸದಸ್ಯ , ಸಾಹಿತಿ ಜಯಾನಂದ ಮಾದರ ಹೇಳಿದರು.

ರವಿವಾರದಂದು ನಗರದ ಜ್ಞಾನ ಮಂದಿರ ಸಭಾಂಗಣದಲ್ಲಿ ಸ್ವರ ಸಾಧನ ಸಂಗೀತ ಕಲಾನಿಕೇತನ ಸಂಘ ಗೋಕಾಕ ಫಾಲ್ಸ್ , ಸ್ವರ ಸಾಧನ ಸಂಗೀತ ವಿದ್ಯಾಲಯ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಗುರು ವಂದನ ,ಸ್ವರ ನಮನ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಬ್ಬ ಕವಿಗೆ ಸ್ತ್ರೀ ಸೌಂದರ್ಯವೇ ಶ್ರೇಷ್ಠ. ಆದರೆ ಒಬ್ಬ ಸಂಗೀತಕಾರ  ಆಲಾಪಗಳಲ್ಲಿ ಸಂಗೀತದ ಸೌಂದರ್ಯ ಕಾಣಬಯಸುತ್ತಾನೆ. ಸಂಗೀತ ಸ್ತ್ರೀ ಸೌಂದರ್ಯಕ್ಕಿಂತಲೂ ಶ್ರೇಷ್ಠವಾದದ್ದಾಗಿದೆ. ಆಭರಣಗಳಿಂದ ಅಲಂಕರಿಸಿಕೊಂಡಾಗ ಸ್ತ್ರೀ ಸೌಂದರ್ಯ  ದ್ವಿಗುಣಗೊಳ್ಳುತ್ತದೆ. ಆದರೆ ಸಂಗೀತದ ಸೌಂದರ್ಯ ಹಾಗಲ್ಲ. ಸಂಗೀತವನ್ನು ಆಳವಾಗಿ ಬಲ್ಲ ವ್ಯಕ್ತಿ ಮಾತ್ರ  ಸಂಗೀತದ  ಆಂತರಿಕ ಸೌಂದರ್ಯವನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಸಂಗೀತಕಾರರು ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಟ್ಟುಕೊಳ್ಳಬೇಕು. ಕಲಾವಿದರು ಸಂಗೀತದ ದಿಗ್ಗಜರನ್ನು ಸ್ಮರಿಸುತ್ತಲೇ ಸಂಗೀತವನ್ನು ಕಲಿಯಬೇಕು . ಅಂದಾಗ ಸಾಧನೆ ಮಾಡಲು ಸಾಧ್ಯ ಆ ದಿಸೆಯಲ್ಲಿ ಇಲ್ಲಿನ ಸಂಗೀತ ಶಾಲೆ ವಿದ್ಯಾರ್ಥಿಗಳಿಗೆ ಸಂಗೀತದ ವಿದ್ಯೆಯನ್ನು ಕಲಿಸುತ್ತಿರುವ ಸಂಗೀತ ಗುರುಗಳ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಜ್ಞಾನ ಮಂದಿರದ ಧರ್ಮದರ್ಶಿ ಸುರ್ವಣ ತಾಯಿ ಹೊಸಮಠ, ಲಕ್ಷ್ಮಣ ಚೌರಿ, ರಜನಿ ಜಿರಗ್ಯಾಳ, ಜಯಾನಂದ ಮಾದರ, ಸೈಯದ್ ಭಾಶಿತ್ ಅಲಿ , ವಿದ್ಯಾ ರೆಡ್ಡಿ, ಡಾ.ವಿಶ್ವನಾಥ್ ಭೋವಿ, ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ವಕ್ಕುಂದ ಉಪಸ್ಥಿತರಿದ್ದರು.

Related posts: