ಗೋಕಾಕ:ಭಾರತ ದೇಶ ಕರ್ಮಭೂಮಿಯಾಗಿದ್ದು, ಉತ್ತಮ ಸಂಸ್ಕಾರದಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ : ಎಂ ಡಿ ಚುನಮರಿ
ಭಾರತ ದೇಶ ಕರ್ಮಭೂಮಿಯಾಗಿದ್ದು, ಉತ್ತಮ ಸಂಸ್ಕಾರದಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ : ಎಂ ಡಿ ಚುನಮರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :
ಭಾರತ ದೇಶ ಕರ್ಮಭೂಮಿಯಾಗಿದ್ದು, ಉತ್ತಮ ಸಂಸ್ಕಾರದಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗೀಯ ಸಂಘ ಸಂಚಾಲಕ ಎಂ ಡಿ ಚುನಮರಿ ಹೇಳಿದರು .
ಶುಕ್ರವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ್ ಗೋಕಾಕ ಇದರ 2 ನೇ ವಾರ್ಷಿಕೋತ್ಸವ ನಿಮಿತ್ತವಾಗಿ ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ ಮತ್ತು ನೇತ್ರ ಚಿಕಿತ್ಸೆಗೆ ಒಳಗೊಂಡ ಫಲಾನುಭವಿಗಳಿಗೆ , ರಕ್ತದಾನಿಗಳಿಗೆ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯರಲ್ಲಿ ಪರೋಪಕಾರ ಹುಟ್ಟಿನಿಂದಲೇ ಬಂದಿದ್ದು, ಅಂತಹ ಕಾರ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ತೊಡಗಿಸಿಕೊಂಡು ದೀನ ದಲಿತರ ಬಡವರ ಉದ್ದಾರಕ್ಕಾಗಿ ಶ್ರಮಿಸುತ್ತಿವೆ. ಇಲ್ಲಿನ ಶ್ರೀ ಸಮರ್ಥ ಫೌಂಡೇಶನ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾದರಿಯಾಗಿ ಮಾಡುತ್ತಿದೆ. ಈ ಸಂಸ್ಥೆಯು ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಹೆಮ್ಮರವಾಗಿ ಬೆಳೆಯಲೆಂದು ಹಾರೈಸಿದರು.
ಸಂಸ್ಥೆಯ ಸತೀಶ ಚಿಪ್ಪಲಕಟ್ಟಿ ಮಾತನಾಡಿ ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಉಚಿತವಾಗಿ ಜನರಿಗೆ ನೀಡಲಾಗುವುದು. ಸಾಯಿ ಮಂದಿರದಲ್ಲಿ ಪ್ರತಿದಿನ ಅನ್ನದಾಸೋಹ ಹಾಗೂ ಶಿರಡಿ ಸಾಯಿಬಾಬಾ ದರ್ಶನಕ್ಕೆ ಭಕ್ತರಿಗೆ ಒಂದು ಬಸ್ ಉಚಿತವಾಗಿ ವ್ಯವಸ್ಥೆ ಮಾಡಲಾಗುವದು ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆಯಿಂದ ಮಾಡಲು ಉದ್ದೇಶಿಸಿಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು.
ವೇದಿಕೆಯ ಮೇಲೆ ವಿಶ್ವನಾಥ್ ಬನಹಟ್ಟಿ, ಶಿಕ್ಷಕರಾದ ಬಿ.ಕೆ ಕುಲಕರ್ಣಿ , ಎಂ.ಬಿ ಸಾಯನ್ನವರ, ಎಸ್.ಕೆ ಹುಲ್ಯಾಳ, ಡಾ.ಕಿರಣ ಪೂಜಾರ, ಡಾ.ಪ್ರೀತಿ ಚೌಧರಿ, ಡಾ.ಸಚಿನ ವಿಭೂತಿ, ಪ್ರಕಾಶ ಚೌಧರಿ, ಬಸವರಾಜ ಉಣ್ಣಿ, ಫೌಂಡೇಶನ್ ಅಧ್ಯಕ್ಷ ಅರುಣ ಸಾಲಳ್ಳಿ ಇದ್ದರು.
ಆನಂದ ಪಾಟೀಲ ಸ್ವಾಗತಿಸಿದರು, ಶೈಲಾ ಕೊಕ್ಕರಿ ನಿರೂಪಿಸಿದರು, ಶ್ರೀನಾಥ್ ಗಾಡವಿ ವಂದಿಸಿದರು.