ಗೋಕಾಕ:ಸದೃಡ ಸಮಾಜ ನಿರ್ಮಿಸಲು ಕಲಾವಿದರು ಮುಂದಾಗಬೇಕು : ಬಸವರಾಜ ಖಾನಪ್ಪನವರ
ಸದೃಡ ಸಮಾಜ ನಿರ್ಮಿಸಲು ಕಲಾವಿದರು ಮುಂದಾಗಬೇಕು : ಬಸವರಾಜ ಖಾನಪ್ಪನವರ
ಗೋಕಾಕ ಅ 3 : ಕಲಾ ವೃತ್ತಿ ಅತ್ಯಂತ ಪವಿತ್ರವಾದದ್ದು , ಕಲಾವಿದರು ಒಳ್ಳೆಯ ಸಮಾಜ ನಿರ್ಮಿಸಲು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ಸೋಮವಾರ ಸಾಯಂಕಾಲ ಗಾಂಧಿ ಜಯಂತಿ ನಿಮಿತ್ಯ ಕರವೇ ಗೋಕಾಕ ತಾಲೂಕ ಘಟಕ ನಗರದ ಲಕ್ಷ್ಮೀ ವಿಹಾರ ಸಭಾಂಗಣದಲ್ಲಿ ಕಲಾವಿದರಿಗೆ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಲಾವಿದರು ತನ್ನ ಜೀವನದಲ್ಲಿಯೂ ಸಹ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಳ್ಳೆಯ ಸಮಾಜ ಕಟ್ಟಲು ಕಂಕಣಬದ್ದರಾಗಬೇಕು , ಕಲೆಯಿಂದ ಮಾತ್ರ ಜನರನ್ನು ತಮ್ಮತ್ತ ಆರ್ಕಷಿಸದೆ ಜೀವನದುದ್ದಕ್ಕೂ ಜನರು ಮೆಚ್ಚುವಂತಹ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತವಾದರೇ ಮಾತ್ರ ಕಲಾವಿದರ ಬಾಳು ಹಸನವಾಗಲು ಸಾಧ್ಯ ಆ ಪವಿತ್ರ ಕಾರ್ಯ ಕಲಾವಿದರಿಂದ ಆಗಬೇಕಾಗಿದೆ ಎಂದು ಖಾನಪ್ಪನವರ ಹೇಳಿದರು
ಕಾರ್ಯಕ್ರಮದ ಧಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಗುರು ಮಹಾದೇವಾಶ್ರಮ ಕಪರಟ್ಟಿಯ ಫೂಜ್ಯ ಶ್ರೀ ಬಸವರಾಜ ಸ್ವಾಮಿಗಳು ಆರ್ಶಿವಚನ ನೀಡಿದರು . ಪ್ರಾಚಾರ್ಯ ಸುರೇಶ ಹನಗಂಡಿ , ಶ್ರೀಗನ್ನಡಂ ಮಹಿಳಾ ವೇದಿಕೆಯ ಶ್ರೀಮತಿ ರಜನಿ ಜೀರಗ್ಯಾಳ , ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ , ಜೆಸಿಐ ಅಧ್ಯಕ್ಷ ವಿಷ್ಣು ಲಾತೂರ , ಗೋಕಾಕ ಉಪ ಕಾರ್ಯಗೃಹದ ಮುಖ್ಯ ಪೇದೆ ಶಕೀಲ ಜಕಾತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಯೂಟ್ಯೂಬ್ ಗಾಯಕ ಮುನ್ನಾ ಪಠಾಣ , ಜಾನಪದ ಕಲಾವಿದರಾದ ನಿಂಗಪ್ಪ ಮೋತ್ಯಾಗೋಳ , ವಾಸುದೇವ ಕೋಲಕಾರ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀ ಸುರೇಶ ಹನಗಂಡಿ ಅವರನ್ನು ಕರವೇ ವತಿಯಿಂದ ಸನ್ಮಾನಿಸಲಾಯಿತು
ಇದಕ್ಕೂ ಮೊದಲು ಸಸಿಗೆ ನೀರೆರೆಯುವ ಮುಖಾಂತರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಯಾನಂದ ಹುಣಶ್ಯಾಳಿ , ಹಿರಿಯ ಕಲಾವಿದರಾದ ಜಿ.ಕೆ.ಕಾಡೇಶಕುಮಾರ ,ರಿಯಾಜ ಚೌಗಲಾ ಕರವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ , ಸುರೇಶ ಜೋರಾಪು, ಈಶ್ವರ ಮಮದಾಪೂರ , ಬಸವರಾಜ ಹತ್ತರಕಿ ,ಕೆಂಪಣ್ಣ ಚಿಂಚಲಿ , ಶಿಕ್ಷಕ ಬಿ.ಎಮ್. ಹನುಮಂತಗೋಳ , ಮಲ್ಲಿಕಾರ್ಜುನ ಕೆ.ಆರ್ , ಅಬ್ಬಾಸ್ ಕೆ ದೇಸಾಯಿ, ಕೆಂಪ್ಪಣಾ ಕಡಕೋಳ ,ಶೆಟ್ಟೆಪಾ ಗಾಡಿವಡ್ಡರ, ರವಿ ನಾವಿ , ನಿಯಾಜ ಪಟೇಲ , ಲಕ್ಕಪ್ಪಾ ನಂದಿ , ಮೀರಾ ಕುಂಬಾರಿ, ಮಹಾಂತೇಶ ದಾಸಪ್ಪಗೋಳ ಸೇರಿದಂತೆ ಕರವೇ ಕಾರ್ಯಕರ್ತರು ಮತ್ತು ಕಲಾವಿದರು ಉಪಸ್ಥಿತರಿದ್ದರು
ನಂತರ ಯೂಟ್ಯೂಬ್ ಗಾಯಕ ಮುನ್ನಾ ಪಠಾಣ ಅವರು ಯೂಟ್ಯೂಬ್ ತಾನು ಹಾಡಿದ ಕೇಲವು ಆಯ್ದ ಹಾಡುಗಳನ್ನು ಹಾಡಿ ರಂಜೀಸಿದರು
ಕಾರ್ಯಕ್ರಮವನ್ನು ಕರವೇ ಸಂಸ್ಕೃತಿ ಘಟಕದ ಶಿವಾನಂದ ಪೂಜಾರಿ ನಿರೂಪಿಸಿ , ವಂದಿಸಿದರು