ಗೋಕಾಕ:ಹೈಮಾಸ್ಕ ವಿದ್ಯುತ್ ದೀಪಗಳನ್ನು ಲೋಕಾರ್ಪಣೆ ಗೋಳಿಸಿದ ವಿ.ಪ ಸದಸ್ಯ ಲಖನ್ ಜಾರಕಿಹೊಳಿ
ಹೈಮಾಸ್ಕ ವಿದ್ಯುತ್ ದೀಪಗಳನ್ನು ಲೋಕಾರ್ಪಣೆ ಗೋಳಿಸಿದ ವಿ.ಪ ಸದಸ್ಯ ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6 :
ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದು , ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಮೀ ದೇವಿ ಪಾದಗಟ್ಟಿ ಆವರಣದಲ್ಲಿ ನಗರಸಭೆ ವತಿಯಿಂದ ಅಳವಡಿಸಲಾದ ಹೈಮಾಸ್ಕ ವಿದ್ಯುತ್ ದೀಪಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರೂ ಸಂಘಟಿತರಾಗಿ ಶಾಸಕರ ಕೈ ಬಲಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಶ್ರೀ ಲಕ್ಷ್ಮೀ ದೇವಿ ಪಾದಗಟ್ಟಿ ಸೇವಾ ಸಮಿತಿಯ ಬಿ.ಬಿ.ರಾಹುತ್ , ವ್ಹಿ.ಜಿ.ಮಿರ್ಜಿ, ಮಹಾದೇವ ಕೌಜಲಗಿ, ಸುರಜ್ ಪಾಟೀಲ, ಡಾ.ಸಿದ್ದಣ್ಣ ಕಮತ್, ಡಾ.ಬಿ.ಎಸ್.ಮದಬಾವಿ ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು