ಗೋಕಾಕ:ದಿನಾಂಕ 12 ರಂದು ಸ್ವಾತಂತ್ರ್ಯೋಸ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಲ್ನಡಿಗೆ ಜಾಥಾ : ಕಾಂಗ್ರೆಸ್ ಮುಖಂಡ ಅಶೋಕ ಮಾಹಿತಿ
ದಿನಾಂಕ 12 ರಂದು ಸ್ವಾತಂತ್ರ್ಯೋಸ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಲ್ನಡಿಗೆ ಜಾಥಾ : ಕಾಂಗ್ರೆಸ್ ಮುಖಂಡ ಅಶೋಕ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 8 :
ಶುಕ್ರವಾರ ದಿನಾಂಕ 12 ರಂದು ಸ್ವಾತಂತ್ರ್ಯೋಸ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಗೋಕಾಕ ಮತಕೇತ್ರದ ಪಾಮಲದಿನ್ನಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜಾಲನೆ ನೀಡುವರು ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಹೇಳಿದರು.
ಸೋಮವಾರದಂದು ನಗರದ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆಯಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರ ವಹಿಸಿದೆ . ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಕಾಲ್ನಡಿಗೆ ಮುಖಾಂತರ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಗೋಕಾಕ ಮತಕೇತ್ರದ ಪ್ರಮಖ ಗ್ರಾಮಗಳಲ್ಲಿ ಸಂಚರಿಸಿ ಸ್ವಾತಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿದ ಮಹಿನೀಯರನ್ನು ಸ್ಮರಿಸುವ ಕಾರ್ಯಮಾಡಲಾಗುವುದು. ಅನೇಕ ಕಾಂಗ್ರೆಸ್ ಮುಖಂಡರು ಈ ಜಾಥಾದಲ್ಲಿ ಭಾಗವಹಿಸುವವರು ಇದರ ಮುಖೇನ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಮಟ್ಟದಲ್ಲಿಯೂ ಸಹ ಬೆಂಗಳೂರಿನಲ್ಲಿ ಅಗಸ್ಟ 15 ರಂದು ಈ ಜಾಥಾ ನಡೆಯಲ್ಲಿದ್ದು ಮಾಜಿ ಸಿಎಂ ಸಿದ್ದರಾಮಯ್ಯ , ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕರು ನಾಯಕರು ಭಾಗವಹಿಸಲ್ಲಿದ್ದು ಪಕ್ಷದ ಈ ಕಾರ್ಯಕ್ರಮದಲ್ಲಿ ಗೋಕಾಕ ಮತಕೇತ್ರದ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕು ಎಂದು ಅಶೋಕ ಪೂಜಾರಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸಿದ್ದಲಿಂಗ ದಳವಾಯಿ, ಪ್ರಕಾಶ ಡಾಂಗೆ, ವಿವೇಕ ಜತ್ತಿ, ಜಾಕೀರ ನಧಾಪ್, ಇಮ್ರಾನ್ ತಫಕೀರ , ಪುಟ್ಟು ಖಾನಾಪುರೆ, ಮುಸ್ತಾಕ ಪುಲತ್ತಾಂಬೆ ಸಂಜು ಪೂಜಾರಿ ಉಪಸ್ಥಿತರಿದ್ದರು.