ಗೋಕಾಕ:ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ, ಸ್ಥಳಕ್ಕೆ ನಾಗಪ್ಪ ಶೇಖರಗೋಳ ಭೇಟಿ
ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ, ಸ್ಥಳಕ್ಕೆ ನಾಗಪ್ಪ ಶೇಖರಗೋಳ ಭೇಟಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 11 :
ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಹತ್ತಿರವಿರುವ ಮಂದ್ರೋಳಿ ಎಂಬುವವರ ತೋಟದಲ್ಲಿ ಬುಧವಾರ ರಾತಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂದ್ರೋಳಿ ಎಂಬುವವರ ತೋಟದಲ್ಲಿ ಕಟ್ಟಿದ ಎಮ್ಮೆಯೊಂದನ್ನು ಚಿರತೆ ಎಳೆದುಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗ್ರಾಮದ ಅಕ್ಕಪಕ್ಕದ ಜನರಲ್ಲಿ ಆತಂಕ ಮನೆ ಮಾಡಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿರುವ ಗೋಕಾಕ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ ಮತ್ತು ತಂಡ ಚಿರತೆ ಶೋಧ ಕಾರ್ಯ ನಡೆಸಿದ್ದು, ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನದಂತೆ ಶೋಧ ಕಾರ್ಯಮಾಡುತ್ತಿದ್ದು, ಶೋಧ ಕಾರ್ಯಕ್ಕೆ ಬೆಳಗಾವಿಯಿಂದ ಹೆಚ್ಚಿನ ತಂಡ ಬರುತ್ತಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನಾಗಪ್ಪ ಶೇಖರಗೋಳ ಭೇಟಿ : ಚಿರತೆ ಪ್ರತ್ಯಕ್ಷವಾಗಿರುವ ಧರ್ಮಟ್ಟಿ ಗ್ರಾಮದ ಮಂದ್ರೋಳಿ ತೋಟಕ್ಕೆ ಕೆಎಂಎಫ್ ಅಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಶಾಸಕರಿಗೆ ಮಾಹಿತಿ ನೀಡಿ, ಶೋಧ ಕಾರ್ಯಕ್ಕೆ ಸಕಲ ವ್ಯವಸ್ಥೆ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿ ಕಾರ್ಯಪ್ರವೃತ್ತವಾಗಿ, ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಹೊರಗಡೆ ತಿರುಗಾಡೆ ಶೋಧ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.