RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸ್ಕೌಟ್ಸ ಮತ್ತು ಗೈಡ್ಸ್ ದಳಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ : ಬಿಇಒ ಜಿ.ಬಿ‌.ಬಳಗಾರ

ಗೋಕಾಕ:ಸ್ಕೌಟ್ಸ ಮತ್ತು ಗೈಡ್ಸ್ ದಳಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ : ಬಿಇಒ ಜಿ.ಬಿ‌.ಬಳಗಾರ 

ಸ್ಕೌಟ್ಸ ಮತ್ತು ಗೈಡ್ಸ್ ದಳಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ : ಬಿಇಒ ಜಿ.ಬಿ‌.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 12 :
ಸ್ಕೌಟ್ಸ ಮತ್ತು ಗೈಡ್ಸ್ ದಳಗಳು ಮಕ್ಕಳಿಗೆ ಬದುಕಿನ ಕಲೆಯನ್ನು ಮೂಡಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.

ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಫ್ರೌಢಶಾಲೆಯಲ್ಲಿ ಕಬ್ಸ್ , ಬುಲ್ – ಬುಲ್ಸ್ ಹಾಗೂ ‌ಸ್ಕೌಟ್ಸ ಮತ್ತು ಗೈಡ್ಸ್ ದಳಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿಗೆ ಸೇರುವದರಿಂದ ನೀವು ಅಂತರರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗುತ್ತಿರಿ ಇದು ಶಿಕ್ಷಣದ ಒಂದು ಭಾಗವಾಗಿದ್ದು, ಶಿಸ್ತಿನೊಂದಿಗೆ ಮಾನಸಿಕ , ಭೌದ್ದಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನ ಗೋಳಿಸುತ್ತದೆ. ಮುಂದಿನ ದಿನಗಳಲ್ಲಿ ಉದ್ಯೋಗ ದೊರಕಿಸುವಲ್ಲೂ ಸಹಕಾರಿಯಾಗುತ್ತದೆ. ಇವುಗಳ ಸದುಪಯೋಗದಿಂದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರೆಂದು ಹಾರೈಸಿದರು.

ವೇದಿಕೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲೂಕು ಘಟಕದ ಕಾರ್ಯದರ್ಶಿ ವಾಯ್.ಬಿ ಲಗಮನ್ನವರ , ಚೇತನಾ ಪಾಟೀಲ, ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ, ಮುಖ್ಯೋಪಾದಾಯರುಗಳಾದ ಆರ್‌.ಎಂ ದೇಶಪಾಂಡೆ, ಎಚ್.ವ್ಹಿ ಪಾಗನಿಸ, ಪಿ.ವ್ಹಿ ಚಚಡಿ, ಸ್ಕೌಟ್ಸ್ ಶಿಕ್ಷಕಿ ಲಕ್ಷ್ಮೀ ದೇವರೆಡ್ಡಿ ಇದ್ದರು.

Related posts: