ಗೋಕಾಕ:ಬಸವಣ್ಣನವರ ಆಚಾರ, ವಿಚಾರಗಳನ್ನು ಆಚರಣೆಗೆ ತರಬೇಕು : ಮುರುಘರಾಜೇಂದ್ರ ಶ್ರೀ
ಬಸವಣ್ಣನವರ ಆಚಾರ, ವಿಚಾರಗಳನ್ನು ಆಚರಣೆಗೆ ತರಬೇಕು : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 14 :
ಎಲ್ಲರ ಅಂತರಾತ್ಮ ಶಿವನ ಸ್ವರೂಪವೇ ಆಗಿದೆ ಎಂದು ನಂಬಿದ್ದ ಬಸವಣ್ಣನವರ ಆಚಾರ, ವಿಚಾರಗಳನ್ನು ಆಚರಣೆಗೆ ತರುವಂತೆ ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 156ನೇ ಮಾಸಿಕ ಶಿವಾನುಭವಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶರಣರ ವಚನಗಳು ಸರ್ವರಿಗೂ , ಸರ್ವಕಾಲಕ್ಕೂ ದಾರಿ ದೀಪವಾಗಿವೆ ಅವುಗಳ ಆಚರಣೆಯಿಂದ ನೆಮ್ಮದಿಯ ಜೀವನ ಸಾಧ್ಯ. ಜೀವನದಲ್ಲಿ ಕಷ್ಟ ಸುಖಗಳು ಶಾಶ್ವತವಲ್ಲ ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯ ಬೇಕೆಂದು ಕರೆ ನೀಡಿದರು.
ವೇದಿಕೆ ಮೇಲೆ ಬಸವನಗೌಡ ಪಾಟೀಲ, ಸುಮಿತ್ರಾ ಗುರಾಣಿ, ಡಾ.ಸಿ.ಕೆ ನಾವಲಗಿ, ಈಶ್ವರಚಂದ್ರ ಬೆಟಗೇರಿ, ಶೋಭಾ ಜತ್ತಿ, ಚಿದಾನಂದ ಹಾಗರಗಿ, ರಾಮಜಿ ಜಂಗನವರ ಇದ್ದರು.
ಎಸ್.ಕೆ ಮಠದ ಸ್ವಾಗತಿಸಿದರು, ಆರ್.ಎಲ್.ಮಿರ್ಜಿ ವಂದಿಸಿದರು.