RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಭವ್ಯ ಭಾರತವು ಇಂದು ವಿಶ್ವ ಗುರುವಾಗಿ ಹೊರ ಹೊಮ್ಮಿದೆ : ತಹಶೀಲ್ದಾರ ಪ್ರಕಾಶ

ಗೋಕಾಕ:ಭವ್ಯ ಭಾರತವು ಇಂದು ವಿಶ್ವ ಗುರುವಾಗಿ ಹೊರ ಹೊಮ್ಮಿದೆ : ತಹಶೀಲ್ದಾರ ಪ್ರಕಾಶ 

ಭವ್ಯ ಭಾರತವು ಇಂದು ವಿಶ್ವ ಗುರುವಾಗಿ ಹೊರ ಹೊಮ್ಮಿದೆ : ತಹಶೀಲ್ದಾರ ಪ್ರಕಾಶ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :
5 ಸಾವಿರ ವರ್ಷಗಳ , 5 ನೂರು ತಲೆಮಾರುಗಳ ಇತಿಹಾಸವಿರುವ ಭವ್ಯ ಭಾರತವು ಇಂದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸರ್ವ ರಂಗಗಳಲ್ಲಿ ತನ್ನದೆ ಆದ ಕೊಡುಗೆಯೊಂದಿಗೆ ವಿಶ್ವ ಗುರುವಾಗಿ ಹೊರ ಹೊಮ್ಮಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು‌.

ಸೋಮವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ, ಪೊಲೀಸ ,ಎನ್.ಸಿ‌.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಶಾಲಾ ತಂಡಗಳಿಂದ ವಂಧನೆ ಸ್ವೀಕರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಎನ್ನುವುದು ಕೇವಲ ಮೂರು ಅಕ್ಷರಗಳ ಒಂದು ಪದವಲ್ಲ , ಅದು ದೇಶದ ಅಭಿವೃದ್ಧಿಯ ಮೂಲಮಂತ್ರವಾಗಿದೆ. ಜಾತಿ ಮತ ಪಂಥಗಳನ್ನು ಬದಿಗೊತ್ತಿ ಒಂದೇ ಧ್ವಜದ ಅಡಿಯಲ್ಲಿ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಶಕ್ತಿಮಂತ್ರವಾಗಿದೆ. ಸ್ವಾತಂತ್ರ್ಯ ಎನ್ನುವುದು ಸ್ವೇಚಾಚಾರ ಎಂದು ಭಾವಿಸದೆ ಭಾರತೀಯರಾದ ನಾವೆಲ್ಲ ಒಂದು ಎಂದು ಒಮ್ಮನಸ್ಸಿನಿಂದ ದುಡಿದು ದೇಶವನ್ನು ಕಟ್ಟಿ ಬೆಳೆಸಬೇಕಾದ ‌ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಆ ದಿಸೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್‌.ಸಿ ಪರೀಕ್ಷೆ’ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಲ್ಯಾಪ್ಟಾಪ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ,
ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಿಕ, ಸಿಪಿಐಗಳಾದ ಗೋಪಾಲ ರಾಠೋಡ, ಶ್ರೀಶೈಲ ಬ್ಯಾಕೂಡ, ಪೌರಾಯುಕ್ತ ಶಿವಾನಂದ ಹಿರೇಮಠ, ಬಿಇಒ ಜಿ.ಬಿ.ಬಳಗಾರ, ಪಿಎಸ್ಐ ಎಂ.ಡಿ.ಘೋರಿ, ತಾಪಂ ಅಧಿಕಾರಿ ಮುರಳೀಧರ ದೇಶಪಾಂಡೆ, ಬಿಸಿಯೂಟ ಸಹಾಯಕ ನಿರ್ದೇಶಕ ಮಲಬ್ಬನ್ನವರ, ಮುಖಂಡರುಗಳಾದ ಬಿ.ಆರ್.ಕೊಪ್ಪ, ಬಸವರಾಜ ಖಾನಪ್ಪನವರ , ಕಿರಣ ಢಮಾಮಗರ , ಸೋಮಶೇಖರ್ ಮಗದುಮ್ಮ , ಸೇರಿದಂತೆ ನಗರಸಭೆ ‌ಸದಸ್ಯರು ಉಪಸ್ಥಿತರಿದ್ದರು

Related posts: