ಗೋಕಾಕ:ಜವಳಿ ಗಿರಣಿ ಕಾರ್ಮಿಕರ ಸಂಘ ಮತ್ತು ಗೋಕಾಕ ಟೆಕ್ಸಟೈಲ್ಸ ಲಿಮಿಟೆಡ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ
ಜವಳಿ ಗಿರಣಿ ಕಾರ್ಮಿಕರ ಸಂಘ ಮತ್ತು ಗೋಕಾಕ ಟೆಕ್ಸಟೈಲ್ಸ ಲಿಮಿಟೆಡ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಮಿಪದ ಗೋಕಾಕ ಫಾಲ್ಸ್ ದಲ್ಲಿ ಕರ್ನಾಟಕ ಜವಳಿ ಗಿರಣಿ ಕಾರ್ಮಿಕರ ಸಂಘ ಮತ್ತು ಗೋಕಾಕ ಟೆಕ್ಸಟೈಲ್ಸ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮ ಮುಖಂಡ ಲಕ್ಷ್ಮೀಕಾಂತ್ ಎತ್ತಿಮನಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಿಲಿನ ವೈದ್ಯಾಧಿಕಾರಿ ಡಾ.ಬಾಲಚಂದ್ರ ಮುನ್ನೋಳಿ, ಎಚ್.ಆರ್.ವಿಭಾಗದ ಚಿದಂಬರ ಕುಲಕರ್ಣಿ, ಹುಲ್ಲೋಳ್ಳಿ ನೇತ್ರಾಲಯದ ವೈದ್ಯ ಡಾ.ಕಮರುದ್ದೀನ ಶೇಖ್, ಪುರಸಭೆ ಸದಸ್ಯ ಸಾವಂತ್ ತಳವಾರ, ಯುನಿಯನ ಪದಾಧಿಕಾರಿಗಳಾದ ರಜಾಕ ಬಾರಗಿರ, ಮಹಾಲಿಂಗ ಸಣ್ಣಕ್ಕಿ ಉಪಸ್ಥಿತರಿದ್ದರು.