ಗೋಕಾಕ:ವಿಶ್ವ ಜಾನಪದ ದಿನಾಚರಣೆ ನಿಮಿತ್ತ ನಿಜಗುಣ ಶಿವಯೋಗಿ ಸಣ್ಣಾಟ ಪ್ರದರ್ಶನ
ವಿಶ್ವ ಜಾನಪದ ದಿನಾಚರಣೆ ನಿಮಿತ್ತ ನಿಜಗುಣ ಶಿವಯೋಗಿ ಸಣ್ಣಾಟ ಪ್ರದರ್ಶನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16:
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಸಮಿತಿ ಬೆಳಗಾವಿ ಹಾಗೂ ಶ್ರೀ ಶಂಕರಲಿಂಗ ಸಂಸ್ಥೆ ಗೋಕಾಕ ಇವರ ಆಶ್ರಯದಲ್ಲಿ”ವಿಶ್ವ ಜಾನಪದ ದಿನಾಚರಣೆ” ಯನ್ನು ನಗರದ ಶ್ರೀ ಶಂಕರಲಿಂಗ ಸಂಸ್ಥೆ ಕಲ್ಯಾಣ ಮಂಟಪದಲ್ಲಿ ಗುರುವಾರ ದಿನಾಂಕ 18 ರಂದು ಸಂಜೆ 6.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಪೂಜ್ಯಶ್ರೀ ಸಾತಯ್ಯ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶಂಕರಲಿಂಗ ಸಂಸ್ಥೆಯ ಚೇರಮನ್ ಡಾ. ರಾಜಶೇಖರ ಗುಣಕಿ ಅವರ ಅಧ್ಯಕ್ಷತೆ ವಹಿಸುವರು. ಮಲ್ಲಿಕಾರ್ಜುನ ಚುನಮರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಮಹಾದೇವ ಪೋತರಾಜ, ಕಜಾಪ ಜಿಲ್ಲಾಧ್ಯಕ್ಷ ಡಾ. ಸಿ ಕೆ ನಾವಲಗಿ ಭಾಗವಹಿಸುವರು.
ಜಾನಪದ ಕಲಾವಿದ ಈಶ್ವರ ಚಂದ್ರ ಬೆಟಗೇರಿ ತಂಡದವರಿಂದ ನಿಜಗುಣ ಶಿವಯೋಗಿ ಸಣ್ಣಾಟ ಪ್ರದರ್ಶನ
ನಡೆಯುವುದೆಂದು ಕಜಾಪ ಜಿಲ್ಲಾಧ್ಯಕ್ಷ ಡಾ. ಸಿ.ಕೆ ನಾವಲಗಿ ಹಾಗೂ ಶಂಕರಲಿಂಗ ಸಂಸ್ಥೆಯ ಅಧ್ಯಕ್ಷ ಪ್ರೊ. ಜಿ.ಎಂ ಅಂದಾನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.