ಗೋಕಾಕ:ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಕ್ರೀಡೆ ಮುಖ್ಯವಾಗಿದೆ : ಪೌರಾಯುಕ್ತ ಶಿವಾನಂದ ಹಿರೇಮಠ
ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಕ್ರೀಡೆ ಮುಖ್ಯವಾಗಿದೆ : ಪೌರಾಯುಕ್ತ ಶಿವಾನಂದ ಹಿರೇಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :
ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಕ್ರೀಡೆ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸದೃಢರಾಗಬೇಕು ಎಂದು ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಬುಧವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ 2022- 23 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ , ಸ್ವರ್ಧೆಯಲ್ಲಿ ಭಾಗವಹಿಸುವದು ಮುಖ್ಯ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ನಿರ್ಣಾಯಕರ ನೀಡುವ ನಿರ್ಣಯನ್ನು ಗೌರವಿಸಬೇಕು. ದಸರಾ ಸಂದರ್ಭದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ತಾಲೂಕಾ ಅನುಷ್ಠಾನ ಅಧಿಕಾರಿ ಬಸವರಾಜ ಹೊಸಮಠ, ದೈಹಿಕ ಪರಿವಿಕ್ಷಕ ಎಲ್.ಕೆ ತೋರಣಗಟ್ಟಿ, ಎಸ್.ಡಿ.ನಗಾರಿ, ಎಂ..ಸಿ ಪಾಗದ, ಬಿ.ಜಿ.ಬಾನೆ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಯಲಪ್ಪ ಹಳ್ಳೂರ, ಸಿದ್ದಣ್ಣ ದುರದುಂಡಿ, ವಿಠಲ ಮುರ್ಕಿಬಾಂವಿ, ರಜನಿಕಾಂತ್ ಮಾಳೋದೆ, ಎನ್.ಬಿ.ಹಿರೇಮಠ, ಕ್ಕೆ.ಎಸ್.ದಡ್ಡಿ, ಮಹಾಲಕ್ಷ್ಮಿ ಮೂಡಲಗಿ ಉಪಸ್ಥಿತರಿದ್ದರು.