RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದಿವಂಗತ ಡಿ.ದೇವರಾಜ ಅರಸು ನೊಂದವರ ,ಹಿಂದುಳಿದ ವರ್ಗದವರ ಕಣ್ಮಣಿಯಾಗಿದ್ದರು: ಬಿಇಒ ಜಿ.ಬಿ.ಬಳಗಾರ

ಗೋಕಾಕ:ದಿವಂಗತ ಡಿ.ದೇವರಾಜ ಅರಸು ನೊಂದವರ ,ಹಿಂದುಳಿದ ವರ್ಗದವರ ಕಣ್ಮಣಿಯಾಗಿದ್ದರು: ಬಿಇಒ ಜಿ.ಬಿ.ಬಳಗಾರ 

ದಿವಂಗತ ಡಿ.ದೇವರಾಜ ಅರಸು ನೊಂದವರ ,ಹಿಂದುಳಿದ ವರ್ಗದವರ ಕಣ್ಮಣಿಯಾಗಿದ್ದರು: ಬಿಇಒ ಜಿ.ಬಿ.ಬಳಗಾರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 20 :
ನೊಂದವರ ,ಹಿಂದುಳಿದ ವರ್ಗದವರ ಕಣ್ಣಮಣಿಯಾಗಿ, ಅವರ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನ ಗೋಳಿಸಿ ಅವರ ಮನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರು ನೆಲೆಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ‌ಹೇಳಿದರು

ಶನಿವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 107 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರಸು ಅವರು ತಮ್ಮ ಅಧಿಕಾರ ಅವಧಿಯಲ್ಲಿ ಶೋಷಿತರ ಕಣ್ಣೀರನ್ನು ಒರೆಸಿ ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನ ಗೋಳಿಸಿದ್ದರು. ಮಾನವೀಯತೆಯ ತಳಹದಿಯ ಮೇಲೆ ಜನತೆಗೆ ಬದುಕನ್ನು ಕಟ್ಟಿಕೊಟ್ಟ ಧೀಮಂತ ನಾಯಕರಾಗಿ ಸಮುದಾಯ ಸಂಭ್ರಮಿಸುವಂತಾ ವ್ಯಕ್ತಿಯಾಗಿದ್ದರು ಅವರ ಯೋಜನೆಗಳ ಸದುಪಯೋಗದಿಂದ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದ ಕ್ರೀಡಾಂಗಣದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ನಗರದ ವಾಲ್ಮೀಕಿ ವೃತ್ತದಿಂದ ನಗರ ಪ್ರಮುಖ ಬೀದಿಗಳಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಯನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಮುಖಂಡರುಗಳಾದ ಟಿ.ಆರ್.ಕಾಗಲ್ ,ಮಡೆಪ್ಪ ತೋಳಿನವರ, ಸುರೇಶ್ ಸನದಿ, ಪೌರಾಯುಕ್ತ ಶಿವಾನಂದ ಹಿರೇಮಠ, ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಆರ್.ಕೆ ಬಿಸಿರೊಟ್ಟಿ, ಗ್ರೇಡ್ – 2 ತಹಸೀಲ್ದಾರ್ ಎಲ್.ಎಚ್ ಬೋವಿ, ಪರಿಸರ ಅಭಿಯಂತರ ಎಂ.ಎಚ್.ಗಜಾಕೋಶ, ಪಿಎಸ್ಐಗಳಾದ ಎಂ.ಡಿ.ಘೋರಿ, ಗರುರಾಜ ಕಲಬುರ್ಗಿ , ಉಪನ್ಯಾಸ ಎ.ಆರ್.ತೋಳಿ, ಅಮೃತ ದಪ್ಪಿನವರ, ಲಕ್ಷ್ಮಣ ಖಡಕಬಾವಿ, ತಾಯಪ್ಪ ಶಾಸ್ತ್ರಿಗೋಲ್ಲರ,ಹಿಂದುಳಿದ ವರ್ಗಗಳ ಪ್ರವಿಳಾ ಬೆವಿನಗಿಡದ, ಆರ್.ಎಸ್.ಬಿದರಿ, ಎಸ್.ಎಸ್.ಕಂಗ್ರಾಳಿ , ಎ.ಎಫ್.ಬಸುಗೌಡರ , ಎ.ಬಿ.ಬಾಗೇವಾಡಿ ಇದ್ದರು.

Related posts: