RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅನಾಥ, ವೃದ್ಧರು, ಕಡು ಬಡವರನ್ನು ಗುರುತಿಸಿ ಸಮಾಜದ ಮುಖವಾಹಿನಿಗೆ ತರುವ ಕಾರ್ಯಮಾಡಬೇಕು : ಮೌಲಾನ ಮುಫ್ತಿ ಇಫ್ತಿಖಾರ ಅಹ್ಮದ್

ಗೋಕಾಕ:ಅನಾಥ, ವೃದ್ಧರು, ಕಡು ಬಡವರನ್ನು ಗುರುತಿಸಿ ಸಮಾಜದ ಮುಖವಾಹಿನಿಗೆ ತರುವ ಕಾರ್ಯಮಾಡಬೇಕು : ಮೌಲಾನ ಮುಫ್ತಿ ಇಫ್ತಿಖಾರ ಅಹ್ಮದ್ 

ಅನಾಥ, ವೃದ್ಧರು, ಕಡು ಬಡವರನ್ನು ಗುರುತಿಸಿ ಸಮಾಜದ ಮುಖವಾಹಿನಿಗೆ ತರುವ ಕಾರ್ಯಮಾಡಬೇಕು : ಮೌಲಾನ ಮುಫ್ತಿ ಇಫ್ತಿಖಾರ ಅಹ್ಮದ್

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 21 :


ಮಾನವ ಶ್ರಮವಹಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡರೆ ಸಮಾಜವನ್ನು ಸದೃಢವಾಗಿ ಕಟ್ಟಲು ಸಾಧ್ಯ , ಸಮಾಜದ ಅನಾಥ, ವೃದ್ಧರು, ಕಡು ಬಡವರನ್ನು ಗುರುತಿಸಿ ಅವರನ್ನು ಸಮಾಜದ ಮುಖವಾಹಿನಿಗೆ ತರುವ ಕಾರ್ಯಮಾಡುವದೆ ನಿಜವಾದ ಸಮಾಜ ಸೇವೆಯಾಗಿದೆ ಎಂದು ಜಮಿಯತ ಉಲಮಾ – ಎ – ಹಿಂದ ನ ರಾಜ್ಯಾಧ್ಯಕ್ಷ ಮೌಲಾನಾ ಮುಫ್ತಿ ಇಫ್ತಿಖಾರ ಅಹ್ಮದ್ ಸಾಹೇಬ ಕಾಶ್ಮಿ ಹೇಳಿದರು.

ರವಿವಾರದಂದು ನಗರದಲ್ಲಿ ಜಮಿಯತ ಉಲಮಾ – ಎ – ಗೋಕಾಕ ಸಂಘದ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಮಾನವ ಎಲ್ಲರನ್ನು ಪ್ರೀತಿಸುವ ಜೀವಿಯಾಗಿದ್ದು, ಜಾತಿ ,ಧರ್ಮ ಪಂಥಗಳನ್ನು ಬದಿಗೋತ್ತಿ ಸಮಾಜ ಸೇವೆಯಲ್ಲಿ ಮಾಡಬೇಕು . ದೇವರು ಮಾನವನಿಗೆ ಮಾತ್ರ ಮನಕುಲದ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಾನೆ ಇದನ್ನು ಅರಿತು ನಾವು ‌ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಸಂಘಟನೆ ವತಿಯಿಂದ ನಿಸ್ವಾರ್ಥವಾಗಿ ಸೇವೆ ಮಾಡಿದರು ಸಹ ಸಮಾಜದಲ್ಲಿ ಕೆಲವರು ಅದನ್ನು ಖಂಡಿಸುವ ಕಾರ್ಯವನ್ನು ಮಾಡಿದರೆ ಕೆಲವರು ಸಂಘಟನೆಯ ಕಾರ್ಯಕ್ರಮಗಳನ್ನು ಹೋಗಳುವ ಕಾರ್ಯ ಮಾಡುತ್ತಾರೆ. ಸಂಘಟಕರು ಇದರ ಬಗ್ಗೆ ಹೆಚ್ಚು ತೆಲೆ ಕೆಡಿಸಿಕೊಳ್ಳದೆ ನಿರಂತರ ಕಾರ್ಯಪ್ರವೃತ್ತವಾಗಿ ಧರ್ಮದ ತಳಹದಿಯ ಮೇಲೆ ಸಮಾಜವನ್ನು ಕಟ್ಟುವ ಕಾರ್ಯ ಮಾಡಬೇಕು. ಆ ದಿಸೆಯಲ್ಲಿ ಜಮಿಯತ ಉಲಮಾ – ಎ – ಸಂಘಟನೆ ಸಕ್ರಿಯವಾಗಿದೆ.
ಕಳೆದ ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಈ ಸಂಘಟನೆ ಸಮಾಜಿಕ ಕಳಕಳಿ ಉಳ್ಳ ಕಾರ್ಯಮಾಡುತ್ತಾ ಬಂದಿದೆ. ಸಂಘಟನೆಯ ಎಲ್ಲಾ ಸದಸ್ಯರು ಒಗ್ಗೂಡಿಸಿಕೊಂಡು ಸಮಾಜದ ವಿವಿಧ ಸ್ಥರಗಳ ಜನರನ್ನು ಗುರುತಿಸಿ ಅವರನ್ನು ಸಮಾಜದ ಮುಖವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 18 ನಗರಗಳಲ್ಲಿ ಜಮಿಯತ ಉಲಮಾ – ಎ- ಹಿಂದ ಸಂಘಟನೆ ಕಾರ್ಯನಿರ್ವಹಿಸುತ್ತದೆ. ಗೋಕಾಕ ನಗರದಲ್ಲಿಯೂ ಸಹ ಈ ಸಂಘಟನೆ 2007 ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೆ ಹಲವಾರು ಸಾಮಾಜಮುಖಿ ಕಾರ್ಯಗಳನ್ನು ಮಾಡಿ ಇಂದು ಅಧಿಕೃತ ಕಛೇರಿಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಸಂಘಟನೆಯಲ್ಲಿ ತೊಡಗಿಕೊಂಡಿರುವವರು ಪ್ರಚಾರಕ್ಕಾಗಿ ಸಮಾಜಸೇವೆ ಮಾಡದೆ ನಿಜವಾದ ಫಲಾನುಭವಿಗಳಿಗೆ ತಮ್ಮ ಸೇವೆ ತಲುಪುವ ರೀತಿಯಲ್ಲಿ ಕಾರ್ಯವನ್ನು ಮಾಡಬೇಕು. ಜಮಿಯತ ಉಲಮಾ ಸಂಘಟನೆ ದೇಶದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯೊಂದಿಗೂ ಸೇರಿಕೊಂಡು ಕಾರ್ಯ ನಿರ್ವಹಿಸುತ್ತದೆ . ಈಗಾಗಲೇ ಜಮಿಯತ ಉಲಮಾ ಹಿಂದ ಸಂಘಟನೆಯ 35 ಸಾವಿರ ಕಾರ್ಯಕರ್ತರು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಸಂಘಟನೆಯಿಂದ ದೇಶದಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಥರಗಳಲ್ಲಿ ತರಬೇತಿಯನ್ನು ನೀಡಿ ಸಮಾಜದ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡಲು ಕನಸು ಹೊಂದಿದ್ದು ಆ ದಿಸೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿಯ ಜಿಲ್ಲಾ ಮುಖಂಡರಾದ ಮೌಲಾನಾ ಮಹ್ಮದ್ ಸಲಿಮಸಾಬ ನದವೀ, ಮೌಲಾನಾ ಮಹ್ಮದ್ ಆರೀಫಸಾಬ ಇನಾಮಿ, ಜಮಿಯತ ಉಲಮಾ -ಎ – ಹಿಂದ್ ಸಂಘಟನೆ ತಾಲೂಕು ಅಧ್ಯಕ್ಷ ಮೌಲಾನಾ ಅಬ್ಬದುಲ್ಲಾ ಸಾಹಬ ರಹೇಮಾನಿ, ಕಾರ್ಯದರ್ಶಿ ಸಮಿವುಲ್ಲಾ ತೆರದಾಳ, ಖಜಾಂಚಿ ಮುಸ್ತಾಕ ಖಂಡಾಯತ, ರಿಯಾಜ ಚಟ್ನಿ, ಮುಖಂಡರಾದ ಅಬ್ದುಲ್ ರಹೇಮಾನ ದೇಸಾಯಿ, ನಜೀರ್ ಶೇಖ, ಇಲಾಹಿ ಖೈರದಿ, ಇಸ್ಮಾಯಿಲ್ ಗೋಕಾಕ, ಹಾಜಿ ಗಫಾರ ಕಾಗಜಿ, ಶರೀಫ ಮುದೋಳ, ದಾದಾಪೀರ ಇಮಾರತವಾಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: