RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಜೀವನದ ಮೌಲ್ಯಗಳನ್ನು ಕಲಿಸುವ ಏಕೈಕ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಯಾಗಿದೆ : ಗಜಾನನ ಮನ್ನಿಕೇರಿ

ಗೋಕಾಕ:ಜೀವನದ ಮೌಲ್ಯಗಳನ್ನು ಕಲಿಸುವ ಏಕೈಕ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಯಾಗಿದೆ : ಗಜಾನನ ಮನ್ನಿಕೇರಿ 

ಜೀವನದ ಮೌಲ್ಯಗಳನ್ನು ಕಲಿಸುವ ಏಕೈಕ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಯಾಗಿದೆ : ಗಜಾನನ ಮನ್ನಿಕೇರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 27 :
ಜೀವನದ ಮೌಲ್ಯಗಳನ್ನು ಕಲಿಸುವ ಏಕೈಕ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಯಾಗಿದೆ ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ ಹೇಳಿದರು.

ಶನಿವಾರದಂದು ನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ.ನಂ 2 ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ,ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಹಾಗೂ ತಾಲೂಕು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ಕೌಟ್ಸ್ ಮಾಸ್ಟರ್ ಮತ್ತು ಗೈಡ್ಸ್ ಕ್ಯಾಪ್ಟನಗಳ ಮೂಲ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನೆಮ್ಮದಿ, ಶಾಂತಿ ಸಮಾಧಾನ ಇವುಗಳನ್ನು ನಾವು ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲಿ ಪಡೆಯ ಬಹುದು. ಒತ್ತಡ ಜೀವನದಲ್ಲಿ ಮೌಲ್ಯಗಳು ಮರೆಯಾಗುತ್ತಿದ್ದು, ಅವುಗಳನ್ನು ಬೆಳೆಸುವಂತ ಕಾರ್ಯಗಳನ್ನು ಮಾಡಬೇಕು. ತಾವು ತರಬೇತಿಯಲ್ಲಿ ಪಡೆದ ಮಾಹಿತಿಗಳಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ದಿಸಿ ಅವರಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಗಾರ, ಅಜೀತ ಮನ್ನಿಕೇರಿ, ಪ್ರಭಾವತಿ ಪಾಟೀಲ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ ಪಾಟೀಲ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ಪದಾಧಿಕಾರಿಗಳಾದ ಪಿ ಎಂ ಪಾಟೀಲ, ಡಿ.ಬಿ.ಅತ್ತಾರ, ಆರ್.ಎ ನಿಂಬಾಳ್ಕರ, ಎಲ್ ಎಸ್.ಮಂಗಿ, ಟಿ.ವ್ಹಿ ಗುದಗಾಪೂರ, ಮಲ್ಲಪ್ಪ ಅಂಬಿ, ಸಂಜೀವ ಕಾಂಬಳೆ, ಎಸ್.ಆರ್.ಪೂಜೇರಿ, ರೇಣುಕಾ , ವಾಯ್.ಬಿ.ಲಗಮನ್ನವರ, ಜಿ.ಬಿ.ನೇಸರಗಿ ಇದ್ದರು.

Related posts: