ಗೋಕಾಕ:ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ : ಬೆಳ್ಳಿ, ಬಂಗಾರ , ನಗದು ವಶ
ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ : ಬೆಳ್ಳಿ, ಬಂಗಾರ , ನಗದು ವಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 27 :
ನಗರದ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ.
ನಗರದ ಜಿ.ಆರ್.ಬಿ.ಸಿ. ಕಾಲೋನಿ ಹತ್ತಿರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಒಬ್ಬನಿಗೆ ಹಿಡಿದುಕೊಂಡು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದ್ದಾರೆ, ಸದರಿಯವನು ತಾನು ಮತ್ತು ಇನ್ನೊಬ್ಬ ಕೂಡಿಕೊಂಡು ಇದೇ ವರ್ಷ 2022 ಮಾರ್ಚ್ ತಿಂಗಳಲ್ಲಿ ಲಕ್ಷ್ಮೀ ಬಡಾವಣೆಯಲ್ಲಿಯ ಒಂದು ಮನೆ ಹಾಗೂ ಜುಲೈ ಆಶ್ರಯ ಬಡಾವಣೆಯಲ್ಲಿಯ ಒಂದು ಕಳ್ಳತನ ಮಾಡಿದ ಬಗ್ಗೆ ಹಾಗೂ ಜೂನ್ ತಿಂಗಳಲ್ಲಿ ವಿದ್ಯಾ ನಗರದಲ್ಲಿ ಒಂದು ಮನೆಯಲ್ಲಿ ಒಪ್ಪಿಕೊಂಡಿದ್ದು , ಆರೋಪಿತನಿಂದ 44 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1 ಕೆಜಿ 100 ಗ್ರಾಂ ಬೆಳ್ಳಿ ವಸ್ತುಗಳ ಸುಮಾರು 3.50.000 ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.