ಗೋಕಾಕ:ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಳಸುವಂತೆ ಕರವೇ ಮನವಿ
ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಳಸುವಂತೆ ಕರವೇ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 29 :
ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಳಸುವಂತೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಇಲ್ಲಿನ ಕರವೇ ಕಾರ್ಯಕರ್ತರು ಸೋಮವಾರದಂದು ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಿದರು.
ಬರುವ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೋಕಾಕ ತಾಲೂಕಿನಾದ್ಯಂತ ಸಾರ್ವಜನಿಕವಾಗಿ ವಿಘ್ನವಿನಾಶಕ ಗಣಪತಿಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಗಣಪತಿ ಹಬ್ಬವನ್ನು ಅತ್ಯಂತ ವಿಜಂಭ್ರಣೆಯಿಂದ ಆಚರಿಸಲಾಗುತ್ತಿರುವದು ಸಂತೋಷದ ಸಂಗತಿಯಾಗಿದ್ದು, ಈ ಬಾರಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸ್ಥಾಪಿಸಲಾಗುವ ಗಣಪತಿ ಮಂಟಪಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮೂಡಿಪಾಗಿಟ್ಟು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಕರ್ನಾಟಕದ ವೀರರಾಣಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಉಮಾಬಾಯಿ ಕುಂದಾಪುರ, ವೀರ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಗಂಗಾಧರರಾವ ದೇಶಪಾಂಡೆ, ಯಶೋಧರ ದಾಸಪ್ಪ,ಮೈಲಾರ ಮಹಾದೇವರು, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಎಸ್. ಹರ್ಡೀಕರ್. ಸರೋಜಿನಿ ನಾಯ್ದು,ಬಳ್ಳಾರಿ ಸಿದ್ದಮ್ಮ,ರಾಣಿ ಅಬ್ಬಕ್ಕ ದೇವಿ,ಉಮಾಬಾಯಿ ಕುಂದಾಪುರ, ಕಮಲಾದೇವಿ ಚಟ್ಟೋಪಾಧ್ಯಾಯ ಸೇರಿದಂತೆ ಕರ್ನಾಟಕದ ಅನೇಕ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಕರ್ನಾಟಕ ರಾಜ್ಯದ ಜನತೆ ಪ್ರಚುರ ಪಡೆಸಿ ಅವರ ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ದಯಾಳುಗಳಾದ ತಾವುಗಳು ಬರುವ ಗಣೇಶ ಹಬ್ಬದ ನಿಮಿತ್ತ ತಾಲೂಕಾಡಳಿತದಿಂದ ಸಾರ್ವಜನಿಕ ಗಣಪತಿ ಮಂಟಪಗಳಲ್ಲಿ ಇವರ ಭಾವಚಿತ್ರಗಳನ್ನು ಅಳವಡಿಸಿ ಅವರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ಸಮಸ್ತ ಕನ್ನಡಿಗರ ವತಿಯಿಂದ ಮನವಿಯಲ್ಲಿ ಕರವೇ ವಿನಂತಿಸಿದೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಬಸವರಾಜ ಗಾಡಿವಡ್ಡರ, ಮಲ್ಲು ಸಂಪಗಾರ, ಹನಿಪ್ ಸನದಿ, ಮುಗುಟ ಪೈಲವಾನ, ಅಶೋಕ ಗಾಡಿವಡ್ಡರ, ಯಾಸಿನ್ ಮುಲ್ಲಾ, ವಿರೇಂದ್ರ ಪತಕಿ, ಕೆಂಪಣ್ಣ ಕಡಕೋಳ, ಶಾನೂಲ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.