ಗೋಕಾಕ:ಕುಸಿದು ಬಿಳುತ್ತಿರುವ ಬೃಹತ್ ಕಲ್ಲುಗಳಿಗೆ ಬೆಚ್ಚಿ ಬಿಳುತ್ತಿರುವ ಪ್ರಯಾಣಿಕರು
ಕುಸಿದು ಬಿಳುತ್ತಿರುವ ಬೃಹತ್ ಕಲ್ಲುಗಳಿಗೆ ಬೆಚ್ಚಿ ಬಿಳುತ್ತಿರುವ ಪ್ರಯಾಣಿಕರು
ಗೋಕಾಕ ಅ 4 : ಕರದಂಟೂರು ಗೋಕಾಕ ನಗರದಿಂದ ಸುಮಾರು 6ಕೀ.ಮಿ ದೂರದಲ್ಲಿರುವ ಗೋಕಾಕ ಫಾಲ್ಸ್ ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತದೆ. ಈ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಸೋಮವಾರದಂದು ಸುರಿದ ಧಾರಾಕಾರ ಮಳೆಗೆ ಕುಸಿದು ಬಿಳುತ್ತಿರುವ ಬೃಹತ್ ಕಲ್ಲುಗಳಿಗಾಗಿ ಪ್ರಯಾಣಿಕರು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ಎದುರಾಗಿದೆ
ಹೌದು,..! ಗೋಕಾಕ ನಗರದಿಂದ ಗೋಕಾಕ ಫಾಲ್ಸ್ ವರೆಗೆ ಸಂಪರ್ಕ ಕಲ್ಪಿಸುವ ಬಾದಾಮಿ ಗೊಡಚಿ ಗೋಕಾಕ ಫಾಲ್ಸ್ ರಸ್ತೆ ರಾ.ಹೆ 134ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ “ಜೋಡ ಪಡಿಗಲ್ಲು” ಸೇರಿದಂತೆ ರಸ್ತೆಯ ಪಕ್ಕದಲ್ಲಿರುವ ಬಂಡೆಗಲ್ಲುಗಳನ್ನು ಸಿಡಿಮದ್ದು ಬಳಸಿ ಒಡೆಯಲಾಗಿತ್ತು. ಒಡೆಯಲಾದ ಕಲ್ಲುಗಳನ್ನು ಸರಿಯಾಗಿ ತೆರವುಗೊಳಿಸದೇ ಇರುವ ಕಾರಣ ಪದೆ ಪದೆ ಮಳೆಗೆ ಬೃಹತ್ ಕಲ್ಲುಗಳು ರಸ್ತೆ ಮಧ್ಯದಲ್ಲಿ ಕುಸಿದು ಬಿಳುತ್ತಿದ್ದು ಜನರು ಈ ರಸ್ತೆಯಲ್ಲಿ ಭಯದಿಂದ ಸಂಚರಿಸಬೇಕಾಗಿದೆ.
ಮಹಾರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಗೋಕಾಕ ಫಾಲ್ಸ್ ಆಗಮಿಸುವ ಪ್ರವಾಸಿಗರಿಗಷ್ಟೇ ಅಲ್ಲದೇ ಮರಡಿಮಠ, ಫಾಲ್ಸ್, ಕೊಣ್ಣೂರು ಸೇರಿದಂತೆ ಈ ಭಾಗದ ಜನರು ಪದೆ ಪದೆ ಕುಸಿದು ಬಿಳುತ್ತಿರುವ ಬ್ರಹತ್ ಪ್ರಮಾಣದ ಕಲ್ಲುಗಳನ್ನು ತೆರವುಗೊಳಿಸುವಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಿಫಲವಾಗಿದ್ದಾರೆಂದು ಹಿಡಿ ಶಾಫ ಹಾಕುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ರಸ್ತೆಯ ಮಧ್ಯದಲ್ಲಿ ಕುಸಿದು ಬಿದ್ದಿರುವ ಬೃಹತ್ ಪ್ರಮಾಣದ ಕಲ್ಲುಗಳನ್ನು ತೆರವುಗೋಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೋಡಬೇಕು ಹಾಗೂ ಸಿಡಿಮದ್ದು ಬಳಸಿ ಒಡೆಯಲಾದ ಎಲ್ಲ ಕಲ್ಲುಗಳನ್ನು ಸರಿಯಾಗಿ ತೆರವುಗೊಳಿಸಿ ಅನಾಹುತಗಳಾಗದಂತೆ ಎಚ್ಚರವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.