ಗೋಕಾಕ:ಮನುಷ್ಯ ಮನುಷ್ಯನನ್ನು ಪ್ರೀತಿಸುವ ದಿನ ಬಂದಾಗ ಮಾತ್ರ ನಾವು ಭವ್ಯ ಭಾರತವನ್ನು ಕಟ್ಟಬಹುದು : ಮೌಲಾನ ಅಬ್ದುರ ರಶೀದ್ ಮುಫ್ತಾಹಿ
ಮನುಷ್ಯ ಮನುಷ್ಯನನ್ನು ಪ್ರೀತಿಸುವ ದಿನ ಬಂದಾಗ ಮಾತ್ರ ನಾವು ಭವ್ಯ ಭಾರತವನ್ನು ಕಟ್ಟಬಹುದು : ಮೌಲಾನ ಅಬ್ದುರ ರಶೀದ್ ಮುಫ್ತಾಹಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 1 :
ಮಾನವ ಮಾನವೀಯ ಮೌಲ್ಯಗಳಿಂದ ತಮ್ಮ ಜೀವನ ಸುಂದರ ಗೋಳಿಸಿಕೊಳ್ಳ ಬಹುದು, ಮನುಷ್ಯ ಮನುಷ್ಯನನ್ನು ಪ್ರೀತಿಸುವ ದಿನ ಬಂದಾಗ ಮಾತ್ರ ನಾವು ಭವ್ಯ ಭಾರತವನ್ನು ಕಟ್ಟಬಹುದು ಆ ದಿಸೆಯಲ್ಲಿ ನಾವೆಲ್ಲರೂ ಒಬ್ಫರನ್ನು ಒಬ್ಬರು ಪ್ರೀತಿಸುವ ಮತ್ತು ಕ್ಷಮಿಸುವ ಮನೋಭಾವವನ್ನು ಹೊಂದಬೇಕು ಎಂದು ಪುನಾದ ಮೌಲಾನ ಅಬ್ದುರ ರಶೀದ್ ಮುಫ್ತಾಹಿ ಹೇಳಿದರು.
ಬುಧವಾರದಂದು ಸಾಯಂಕಾಲ ನಗರದ ಕೆಜಿಎನ್ ಸಭಾಂಗಣದಲ್ಲಿ ಇಲ್ಲಿನ ಜಮಿಯತ ಎ ಉಲಮಾ ಹಿಂದ್ ಸಂಘಟನೆ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಜಾಗೃತಿ ಮತ್ತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಜಗತ್ತಿನಲ್ಲಿ ಹುಟ್ಟಿದ ಅನೇಕ ಮಹಾತ್ಮರು ಯಾರಿಗೂ ಹಿಂಸೆ ಮಾಡದೆ ಮಾನವ ಧರ್ಮವನ್ನು ಪ್ರೀತಿಸುವ ಸಂದೇಶವನ್ನು ನೀಡಿದ್ದಾರೆ. ಆದರೆ ಮುಸ್ಲಿಂ ಸಮುದಾಯದವನ್ನು ಇಂದು ಸಂಶಯಾಸ್ಪದವಾಗಿ ನೋಡುತ್ತಿರುವದು ತುಂಬಾ ನೋವನ್ನುಂಟು ಮಾಡಿದೆ. ಆ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬಂದು ಭವ್ಯ ಭಾರತವನ್ನು ಕಟ್ಟುಲು ಮುಂದಾಗಿ ಜಗತ್ತಿನಲ್ಲಿ ಎಲ್ಲಾ ಧರ್ಮಿಯ ಜನರನ್ನು ಪ್ರೀತಿಸುವ ಧರ್ಮ ಇಸ್ಲಾಂ ಧರ್ಮ ಎಂದು ಮನದಟ್ಟು ಮಾಡಬೇಕಾಗಿದೆ.
ಮಾನವನಿಗೆ ಶಿಕ್ಷಣ ಇಂದು ಬಹುಮುಖ್ಯವಾದ ಅಸ್ತ್ರವಾಗಿದೆ ಇದರ ಸದುಪಯೋಗದಿಂದ ಎಲ್ಲರೂ ಒಂದೇ ಎಂಬ ಭಾವನೆಯಿಂದ ಮುನ್ನುಡೆದರೆ ಸಮಾಜವನ್ನು ಮುರಿಯಲು ಸಾಧ್ಯವಿಲ್ಲ. ಪರಸ್ಪರ ನಿಂಧನೆ ಮಾಡದೆ ಪ್ರೀತಿಯಿಂದ ಬಾಳುವದನ್ನು ಪ್ರತಿಯೊಬ್ಬರು ಕಲಿಯಬೇಕು. ಅಂದಾಗ ಮನುಕುಲ ಉದ್ದಾರವಾಗಲು ಸಾಧ್ಯ ಆ ದಿಸೆಯಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಮಿಯತ ಎ ಉಲಮಾ ಹಿಂದ್ ನ ಈ ಸಂದರ್ಭದಲ್ಲಿ ಮುಫ್ತಿ ಖ್ವಾಜಾ ಅಬ್ದುಲ್ ಮತೀನ ಇನಾಮಿ , ಮೌಲಾನ ಮಹ್ಮದ್ ಅಸೀಫ್ ಇನಾಮಿ, ಮೌಲಾನ ಖಾರಿ ಜಬೀವುಲ್ಲಾ, ಮೌಲಾನ ಅಜೀಜ್ ಇನಾಮಿ, ಮೌಲಾನ ಮಾವೀಯಾ , ಮೌಲಾನ ಮಹೆಬೂಬ ಸುಳೇಬಾವಿ, ಹಾಪೀಜ್ ಗೌಸ , ಮುಖಂಡರುಗಳಾದ ಎಚ್.ಡಿ.ಮುಲ್ಲಾ, ಅಬ್ದುಲ್ ಖೈರದಿ, ಅಬ್ದುಲ್ ಹಮೀದ್ ನೇರ್ಲಿ, ಇರ್ಶಾದ್ ಪಟೇಲ, ಜುಬೇರ ದೇವಡಿ, ಅಜೀಮ್ ಬಾಳೆಕುಂದ್ರಿ, ಸದಾಕತ ಅಲಿ ಮಕಾನದಾರ, ಶಪೀ ದೇವಡಿ, ತೌಪೀಕ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.