ಗೋಕಾಕ:ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹುಮುಖ್ಯ : ಶಾಸಕ ಸತೀಶ ಅಭಿಮತ
ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹುಮುಖ್ಯ : ಶಾಸಕ ಸತೀಶ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 1 :
ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹುಮುಖ್ಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ,ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಬುಧವಾರದಂದು ಸಾಯಂಕಾಲ ನಗರದ ಕೆಜಿಎನ್ ಸಭಾಂಗಣದಲ್ಲಿ ಇಲ್ಲಿನ ಜಮಿಯತ ಎ ಉಲಮಾ ಹಿಂದ್ ಸಂಘಟನೆ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಜಾಗೃತಿ ಮತ್ತು ತರಬೇತಿ ಶಿಬಿರದಲ್ಲಿ ಮುಖ್ಯ ಅತಿಯಾಗಿ ಭಾಗವಹಿಸಿ ಅವರು ಮಾತನಾಡಿದರು
ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು. ಈ ಸಮುದಾಯದಲ್ಲಿಯೂ ಸಹ ಪ್ರತಿ ವರ್ಷ ಒಳ್ಳೆಯ ಶಿಕ್ಷಣ ಪಡೆದು ಹಲವಾರು ವೈದ್ಯರು, ಇಂಜಿನಿಯರಗಳು ಬಹುಮುಖ್ಯವಾಗಿ ವಕೀಲರಾಗಿ ಹೊರಹೊಮ್ಮಬೇಕು. ಆ ದಿಸೆಯಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸವನ್ನು ಕೊಡಿಸಬೇಕು . ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ನಾವು ಕೂಡಾ ಹಲವು ಸ್ಥರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಮುಂಬರುವ ದಿನಗಳಲ್ಲಿ ಮುಸ್ಲಿಂ ಸಮುದಾಯ ಜನರಿಗೆ , ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳೊಂದಿಗೆ ಮುಸ್ಲಿಂ ಸಮಾಜದವರು ಕೂಡಿಕೊಂಡು ಸಮಾಜ ಕಟ್ಟುವ ಕಾರ್ಯಮಾಡಬೇಕಾಗಿದೆ. ಅಹಿಂದ ಸಮಾಜದವರು ಆಗಾಗಾ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಪುನಾದ ಮೌಲಾನ ಅಬ್ಬರ ರಶೀದ್ ಮುಫ್ತಾಹಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಫ್ತಿ ಖ್ವಾಜಾ ಅಬ್ದುಲ್ ಮತೀನ ಇನಾಮಿ , ಮೌಲಾನ ಮಹ್ಮದ್ ಅಸೀಫ್ ಇನಾಮಿ, ಮೌಲಾನ ಖಾರಿ ಜಬೀವುಲ್ಲಾ, ಮೌಲಾನ ಅಜೀಜ್ ಇನಾಮಿ, ಮೌಲಾನ ಮಾವೀಯಾ , ಮೌಲಾನ ಮಹೆಬೂಬ ಸುಳೇಬಾವಿ, ಹಾಪೀಜ್ ಗೌಸ , ಮುಖಂಡರುಗಳಾದ ಎಚ್.ಡಿ.ಮುಲ್ಲಾ, ಅಬ್ದುಲ್ ಖೈರದಿ, ಅಬ್ದುಲ್ ಹಮೀದ್ ನೇರ್ಲಿ, ಇರ್ಶಾದ್ ಪಟೇಲ, ಜುಬೇರ ದೇವಡಿ, ಅಜೀಮ್ ಬಾಳೆಕುಂದ್ರಿ, ಸದಾಕತ ಅಲಿ ಮಕಾನದಾರ, ಶಪೀ ದೇವಡಿ, ತೌಪೀಕ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.