ಗೋಕಾಕ:ದಿ. 6 ರಂದು ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿಯ ಉತ್ಸವ : ವೇದಮೂರ್ತಿ ಶ್ರೀ ವಿಜಯ ಸ್ವಾಮಿಜೀ ಮಾಹಿತಿ
ದಿ. 6 ರಂದು ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿಯ ಉತ್ಸವ : ವೇದಮೂರ್ತಿ ಶ್ರೀ ವಿಜಯ ಸ್ವಾಮಿಜೀ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 4 :
ನಗರದ ಅಂಬಿಗೇರ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿಯ ಉತ್ಸವ ಮಂಗಳವಾರ ದಿ. 6 ರಂದು ಜರುಗಲಿದೆ ಎಂದು ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿಯ ಸಂಸ್ಥಾಪಕ ವೇದಮೂರ್ತಿ ಶ್ರೀ ವಿಜಯ ಸ್ವಾಮಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಲೋಕ ಕಲ್ಯಾಣಕ್ಕಾಗಿ ಕಳೆದ 10 ವರ್ಷಗಳಿಂದ ನೈಸರ್ಗಿಕವಾಗಿ ಹುತ್ತಿನ ಮಣ್ಣು, ಅರಶಿನ, ಕುಂಕುಮದಿಂದ ಮನೆಯಲ್ಲಿಯೇ ತಯಾರಿಸಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಮಂಗಳವಾರದಂದು ಮುಂಜಾನೆ 8 ಘಂಟೆಗೆ ಜರುಗುವ ಉತ್ಸವದ ನಿಮಿತ್ಯವಾಗಿ ಚಿಕ್ಕ ಮಕ್ಕಳಿಗೆ ಅಕ್ಷರಭ್ಯಾಸ ಸ್ವರ್ಧೆ, ಬೇಡ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಜರುಗುವುದು. ಬೆಳಿಗ್ಗೆ 10 ಘಂಟೆಗೆ ಶ್ರೀ ಗುರುಗಳಿಂದ ಪೂರ್ಣಾಹುತಿ ಹಾಗೂ ಧರ್ಮಸಭೆ ಜರುಗುವುದು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು ಮುರುಸಾವಿರ ಮಠ ಉಪ್ಪಿನ ಬೆಟಗೇರಿಯ ಪೂಜ್ಯ ಶ್ರೀ ಕುಮಾರ್ ವಿರುಪಾಕ್ಷೇಶ್ವರ ಮಹಾಸ್ವಾಮಿಗಳು ವಹಿಸುವರು, ಅಧ್ಯಕ್ಷತೆಯನ್ನು ಮುಪ್ಪಯ್ಯನ ಮಠದ ಶ್ರೀ ಷ.ಬ್ರ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ನೇರವೆರಿಸುವರು. ಘೋಡಗೇರಿಯ ಪೂಜ್ಯ ಶ್ರೀ ಮಲ್ಲಯ್ಯ ಸ್ವಾಮಿಗಳು, ವೇದಮೂರ್ತಿ ಶ್ರೀ ವಿರುಪಾಕ್ಷಯ್ಯ ಹೂಲಿಮಠ ಅಜ್ಜನವರು, ಮಾತೋಶ್ರೀ ಶ್ರೀ ಸುರ್ವಣಾತಾಯಿ ಹೊಸಮಠ, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು. ಮಧ್ಯಾಹ್ನ 1 ಘಂಟೆಗೆ ಮಹಾಪ್ರಸಾದ ಜರುಗಲಿದ್ದು, ಸಾಯಂಕಾಲ 4 ಘಂಟೆಗೆ ವಿಸರ್ಜನೆ ಪೂಜೆ ಸಕಲ ವಾದ್ಯ ಮೇಳಗಳೊಂದಿಗೆ ಜರುಗಲಿದೆ. ಸಮಸ್ತ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಸಂಕಷ್ಟಹರ ಗಣಪತಿಯ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ವಿಜಯ ಸ್ವಾಮಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.