ಗೋಕಾಕ:ಗಂಭೀರವಾಗಿ ಗಾಯಗೊಂಡಿದ್ದ ಹದ್ದು (ಗರುಡ) ಪಕ್ಷಿಯನ್ನು ರಕ್ಷಿಸಿ ಔಷಧೋಪಚಾರ ಮಾಡಿದ ಗೋಕಾಕಿನ ಯುವಕ
ಗಂಭೀರವಾಗಿ ಗಾಯಗೊಂಡಿದ್ದ ಹದ್ದು (ಗರುಡ) ಪಕ್ಷಿಯನ್ನು ರಕ್ಷಿಸಿ ಔಷಧೋಪಚಾರ ಮಾಡಿದ ಗೋಕಾಕಿನ ಯುವಕ
ಗೋಕಾಕ ಅ 4 : ಪ್ರತಿ ವರ್ಷ ಅಕ್ಟೋಬರ್ 4 ರಂದು ನಾವು ” ವನ್ಯಜೀವಿ ಸಂರಕ್ಷಣಾ” ದಿನವನ್ನಾಗಿ ಆಚರಿಸುತ್ತೇವೆ ಈ ದಿನ ನಾವು ಪ್ರಾಣಿ , ಪಕ್ಷಿಗಳನ್ನು ರಕ್ಷಿಸುವ ಭಾಷಣ ಕೇಳುತ್ತವೆ ಅವುಗಳನ್ನು ಉಳಿಸಿ ಬೆಳೆಸುವ ಪ್ರಮಾಣ ಮಾಡಿ ನಿಜ ಜೀವನದಲ್ಲಿ ಅದನ್ನು ಮರೆತು ಬಿಡುತ್ತೇವೆ ಆದರೆ ನಿಜ ಜೀವನದಲ್ಲಿಯೂ ಸಹ ಇತಂಹ ಅಪರೂಪದ ಕಾರ್ಯ ಮಾಡಿ ಒಬ್ಬ ಯುವಕ ಎಲ್ಲರಿಗೂ ಮಾದರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ
ಪ್ರಾಣಿ ಪಕ್ಷಿಗಳನ್ನು ಕಂಡರೆ ಅವುಗಳಿಂದ ದೂರ ಓಡುವ ಮನುಷ್ಯರೇ ಹೆಚ್ಚಿರುವಾಗ ಅವುಗಳನ್ನು ರಕ್ಷಿಸುವುದು ಮನಸ್ಸು ಹೊಂದಿರುವ ಜನ ಬಹಳ ವಿರಳ ಅಂತಹ ವಿರಳರ ಸಾಲಿನಲ್ಲಿ ಗೋಕಾಕಿನ ಒಬ್ಬ ಯುವಕ ಸೇರಿದ್ದಾನೆ
ಇಲ್ಲಿಯ ಕರವೇ ಗೋಕಾಕ ತಾಲೂಕ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರ ಮಗ ರಮೇಶ ಖಾನಪ್ಪನವರ ಗಂಭೀರ ಗಾಯಗೊಂಡು ಬಿದ್ದಿದ ಹದ್ದು (ಗರುಡ ) ಪಕ್ಷಿಯನ್ನು ಮನೆಗೆ ತಂದು ಅದರ ಔಷಧೋಪಚಾರ ಮಾಡಿ ಅದನ್ನು ರಕ್ಷಿಸಿದ್ದಾನೆ
ಒಂದು ವಾರದ ಹಿಂದೆ ನಗರದ ಹೊರವಲಯದ ಮೆಹದಿ ಕೌಲನಿಯಲ್ಲಿ ಸಸಿಗಳಿಗೆ ನೀರುನಿಸಲು ಹೋದ ಸಂಧರ್ಭದಲ್ಲಿ ಕುತ್ತಿಗೆ ಗಂಭೀರವಾಗಿ ಗಾಯಗೊಂಡ ಬಿದ್ದಿದ್ದ ಹದ್ದು (ಗರುಡ) ಪಕ್ಷಿಯನ್ನು ಹಿಡಿದು ತಂದು ಕುತ್ತಿಗೆಗೆ ಗಾಯವಾಗಿದ್ದ ಹದ್ದು (ಗರುಡ)ವನ್ನು ಗೆಳೆಯರ ಸಲಹೆಯ ಮೇರೆಗೆ ಕಳೆದ ವಾರದಿಂದ ಔಷಧೋಪಚಾರ ಮಾಡಿ ಅದನ್ನು ರಕ್ಷಿಸಿ ಮಾನವೀಯತೆ ಮೇರೆದಿದ್ದಾನೆ .
ವಾರದಿಂದ ಚಿಕಿತ್ಸೆ ಪಡೆದ ಹದ್ದು (ಗರುಡದ) ಗಾಯ ವಾಸಿಯಾಗಿದ್ದು ಸಾಮಾನ್ಯ ಸ್ಥಿತಿಗೆ ಮರಳಿದೆ ಇಷ್ಟರಲ್ಲೇ ಇದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗುವುದು ಎಂದು ಹದ್ದು (ಗರುಡ ) ಪಕ್ಷಿಯನ್ನು ರಕ್ಷಿಸಿದ ಯುವಕ ರಮೇಶ ಖಾನಪ್ಪನವರ ತಿಳಿಸಿದ್ದಾನೆ