RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿ : ರಾಮಾನಂದ ಭಾರತಿ ಸ್ವಾಮಿಜಿ

ಗೋಕಾಕ:ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿ : ರಾಮಾನಂದ ಭಾರತಿ ಸ್ವಾಮಿಜಿ 

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿ : ರಾಮಾನಂದ ಭಾರತಿ ಸ್ವಾಮಿಜಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 14 :

 

ಇಂದಿನ ಸ್ಪರ್ಧಾತ್ಮಕ ದಿನಮಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಎಷ್ಟು ಓದಿದರೂ ಕಡಿಮೆ. ಸೂಪ್ತ ಪ್ರತಿಭೆ ಇರುವ ಪ್ರತಿಭಾವಂತ ಶಾಲಾ-ಕಾಲೇಜು ಮಕ್ಕಳಿಗೆ ಸಹಾಯ, ಸಹಕಾರ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಇತ್ತೀಚೆಗೆ ನಡೆದ 38ನೇ ಸತ್ಸಂಗ ಸಮ್ಮೇಳನ ಸಮಾರೂಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರು, ಗಣ್ಯರು, ದಾನಿಗಳನ್ನು ಸತ್ಕರಿಸಿ ಮಾತನಾಡಿದರು.
ಮನುಷ್ಯನಾಗಿ ಜನ್ಮ ತಾಳಿದ ನಾವೆಲ್ಲರೂ ಮಾನವೀಯತೆ, ಸಾರ್ಥಕತೆಯಿಂದ ಬದುಕಬೇಕು. ಮಾನವ ಜನ್ಮ ದೊಡ್ಡದಾಗಿದೆ. ಮಹಾಸ್ವಾಮೀಜಿ, ಶರಣರು ಸಾಧು ಸಂತರ ಪಾದಸ್ಪರ್ಶದಿಂದ ಬೆಟಗೇರಿ ಗ್ರಾಮ ಸುಕ್ಷೇತ್ರವಾಗಿ ಕಂಗೊಳಿಸುತ್ತಿದೆ ಎಂದು ರಾಮಾನಂದ ಭಾರತಿ ಸ್ವಾಮಿಜಿ ಹೇಳಿದರು.
ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಹುಣಶ್ಯಾಳದ ನಿಜಗುಣ ದೇವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಶಿವಶರಣೆ ಮೈತ್ರಾದೇವಿ ಅವರ ಸಮ್ಮುಖದಲ್ಲಿ 7ನೇ ತರಗತಿಯ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದು ಬೆಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆಗೈದ ಸ್ಥಳೀಯ ಪತ್ರಕರ್ತ ಅಡಿವೇಶ ಮುಧೋಳ ಅವರ ಪುತ್ರ ಕುಮಾರ ಪವನ ಅಡಿವೆಪ್ಪ ಮುಧೋಳ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ, ದಾನಿಗಳಿಗೆ ಶ್ರೀಗಳಿಂದ ಸತ್ಕರಿಸಿದ ಬಳಿಕ ಸಕಲ ಶ್ರೀಗಳು ಮತ್ತು ಮಾತೋಶ್ರೀಗಳಿಂದ ಪ್ರವಚನ, ಪಹಾಪ್ರಸಾದ ನಡೆದು ಸತ್ಸಂಗ ಸಮ್ಮೇಳನ ಸಮಾರೂಪಗೊಂಡಿತು.
ಶರಣರಾದ ಪುಂಡಲೀಕಪ್ಪ ಪಾರ್ವತೇರ, ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ಬಸಪ್ಪ ತೋಟಗಿ, ನಿಂಗಪ್ಪ ಕಂಬಿ, ಶ್ರೀಧರ ದೇಯನ್ನವರ, ರಾಮಣ್ಣ ಮುಧೋಳ, ಬಸನಗೌಡ ದೇಯನ್ನವರ, ಗೌಡಪ್ಪ ಮೆಳೆನ್ನವರ, ಬಸವರಾಜ ನೀಲನ್ನವರ, ಈರಪ್ಪ ದೇಯಣ್ಣವರ, ಸ್ಥಳೀಯ ಈಶ್ವರ ಭಜನಾ ಮಂಡಳಿ ಸದಸ್ಯರು, ಶರಣರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗಣ್ಯರು, ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು ಇದ್ದರು.

Related posts: