ಗೋಕಾಕ:ಬೈಕ್-ಬಸ್ ಮುಖಾಮುಖಿ ಡಿಕ್ಕ: ಬೈಕ್ ಸವಾರ ಸ್ಥಳದಲ್ಲೇ ಸಾವು
ಬೈಕ್-ಬಸ್ ಮುಖಾಮುಖಿ ಡಿಕ್ಕ: ಬೈಕ್ ಸವಾರ ಸ್ಥಳದಲ್ಲೇ ಸಾವು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 15 :
ಗೋಕಾಕ-ಯರಗಟ್ಟಿ ರಾಜ್ಯ ಹೆದ್ದಾರಿ ಮಾರ್ಗಮಧ್ಯೆ ಬೈಕ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರದಂದು ಜರುಗಿದೆ.
ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ರೇವಪ್ಪ ಬಣವಿ (36) ಮೃತ ದುರ್ದೈವಿಯಾಗಿದ್ದಾರೆ.ವೈಯಕ್ತಿಕ ಕೆಲಸ ಮುಗಿಸಿ ಗೋಕಾಕದಿಂದ ಚಿಕ್ಕನಂದಿಗೆ ರೇವಪ್ಪ ಹೊರಟಿದ್ದರು ಎನ್ನಲಾಗಿದೆ. ಉಡುಪಿಯಿಂದ ಗೋಕಾಕ ಕಡೆಗೆ ಬರುತ್ತಿದ್ದ ಬಸ್- ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ.ಬಸ್ ಮುಂಭಾಗಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ರೇವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.