RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ : ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ

ಗೋಕಾಕ:ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ : ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ 

ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ : ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 22 :
ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ ಎಂದು ಆಯೋಗಗಳು ನೀಡಿದ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೊಳಿಸಬೇಕೆಂದು ಹೊಸದುರ್ಗದ ಶ್ರೀ ಭಗೀರಥ ಪೀಠದ ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ ಹೇಳಿದರು.
ಅವರು, ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತ, ರಾಜ್ಯದಲ್ಲಿ ಉಪ್ಪಾರ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಸೂಕ್ತ ರಾಜಕೀಯ ಸ್ಥಾನ ಮಾನ ಸೀಗದೆ ಸಮಾಜ ಅಭಿವೃದ್ಧಿಯಾಗಿಲ್ಲ. ಸಮಾಜ ಭಾಂದವರು ಸಂಘಟಿತರಾಗಿ ಮೀಸಲಾತಿ ಜಾರಿಗಾಗಿ ಒತ್ತಾಯಿಸುವಂತೆ ಹೇಳಿದರು.
ಬೆಳಗಾವಿ ವಿಭಾಗದಲ್ಲಿ ಶಾಖಾ ಮಠವನ್ನು ಪ್ರಾರಂಭಿಸಿ ಈ ಭಾಗದ ಜನರಿಗೆ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿ ಧರ್ಮ ಜಾಗೃತಿಯನ್ನು ಮೂಢಿಸಲಾಗುವದು. ಹೊಸದುರ್ಗದ ಶ್ರೀ ಭಗೀರಥ ಫೀಠದಲ್ಲಿ ಭಗೀರಥರ 65ಅಡಿ ಎತ್ತರ ಏಕಶೀಲಾ ಮೂತಿಯನ್ನು ಪ್ರತಿಷ್ಠಾಪಿಸಲಾಗುವದು. ಇದರ ನಿಮಿತ್ಯ ಬೀದರನಿಂದ ಚಾಮರಾಜ ನಗರದ ವರೆಗೂ ಭಗೀರಥ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗುವದು. ಮುಂಬರುವ ದಿನಗಳಲ್ಲಿ ಸಮಾಜ ಐದು ಲಕ್ಷಕ್ಕೂ ಅಧಿಕ ಉಪ್ಪಾರ ಸಮಾಜ ಭಾಂದವರನ್ನು ಸೇರಿಸಿ ಈ ಭಾಗದಲ್ಲಿ ಬೃಹತ ಸಮಾವೇಶ ಏರ್ಪಡಿಸುವ ಮೂಲಕ ಮೀಸಲಾತಿಗಾಗಿ ಒತ್ತಾಯಿಸಲಾಗುವದು ಎಂದು ತಿಳಿಸಿದರು.
ಗೋಕಾಕ ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಮಾತನಾಡಿ, ಇದೆ ದಿ.24 ರಂದು ಮುಂಜಾನೆ 10 ಗಂಟೆಗೆ ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಉಪ್ಪಾರ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈ ಸಮಾರಂಭದಲ್ಲಿ ಪೂಜ್ಯರು, ಶಾಸಕರು ಹಾಗು ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾಜ ಭಾಂದವರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೀರಿಶ ಉಪ್ಪಾರ, ಶ್ರೀ ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷ ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ನಗರಸಭೆ ಸದಸ್ಯ ಭಗವಂತ ಹುಳ್ಳಿ ಸಮಾಜದ ಮುಖಂಡರುಗಳಾದ ಎಸ್ ಎಮ್ ಹತ್ತಿಕಟಗಿ, ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ಅಶೋಕ ಗೋಣಿ, ಭರಮಣ್ಣ ಉಪ್ಪಾರ, ಭೀಮಶಿ ಭರಮನ್ನವರ, ನ್ಯಾಯವಾದಿಗಾಳ ರವಿ ಕೊಪ್ಪ, ಗಂಗಾಧರ ಭಟ್ಟಿ, ವಾಯ್ ಎಲ್ ದುರದುಂಡಿ, ಮುತ್ತೆಪ್ಪ ಕುಳ್ಳೂರ, ಯಲ್ಲಪ್ಪ ಸುಳ್ಳನವರ, ಬಸವರಾಜ ಖಾನಪ್ಪನವರ, ಸದಾಶಿವ ಗುದಗೋಳ, ಮಾಯಪ್ಪ ತಹಶೀಲ್ದಾರ, ಯಲ್ಲಪ್ಪ ಹೆಜ್ಜೆಗಾರ, ಎಸ್ ಎಸ್ ಪಾಟೀಲ, ಬಸವರಾಜ ಆಯಟ್ಟಿ ಇದ್ದರು.

Related posts: