RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಮೀಸಲಾತಿ ಪೈಟ್ : ನಾವು ಕೂಡಾ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ: ಶಾಸಕ ಸತೀಶ

ಗೋಕಾಕ:ಮೀಸಲಾತಿ ಪೈಟ್ : ನಾವು ಕೂಡಾ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ: ಶಾಸಕ ಸತೀಶ 

ಮೀಸಲಾತಿ ಪೈಟ್ : ನಾವು ಕೂಡಾ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ: ಶಾಸಕ ಸತೀಶ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :

 

ಅಕ್ಟೋಬರ್ 9 ರಂದು ಸರಕಾರದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿ ಸಮಾರಂಭಕ್ಕೆ ಬಹಿಷ್ಕಾರ ಹಾಕಲು ರಾಜ್ಯ ಮಟ್ಟದಲ್ಲಿ ತೀರ್ಮಾನಿಸಿದ್ದು, ನಾವು ಕೂಡಾ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ರವಿವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ 222 ದಿನಗಳಿಂದ ಸ್ವಾಮೀಜಿಗಳು ಎಸ್.ಟಿ ಸಮುದಾಯಕ್ಕೆ 7.5 ಪ್ರತಿಶತ ಮಿಸಲಾತಿ ಒಗದಿಸುವಂತೆ ಕೋರಿ ಪ್ರತಿಭಟನೆ ನಡೆಸುತ್ತಿದ್ದರು ಸಹ ಬೊಮ್ಮಾಯಿ ಸರಕಾರ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದರು. ವೈಯಕ್ತಿಕವಾಗಿ ಎಲ್ಲಾ ಕಡೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಸರಕಾರ ವತಿಯಿಂದ ಜರಗುವ ಕಾರ್ಯಕ್ರಮಕ್ಕೆ ಮಾತ್ರ ಈ ಬಹಿಷ್ಕಾರ. ಸಚಿವ ಶ್ರೀರಾಮುಲು ಅವರು ಪಕ್ಷ ಅಧಿಕಾರಕ್ಕೆ ಬಂದರೆ 24 ಘಂಟೆಗಳಲ್ಲಿ ಮಿಸಲಾತಿ ಒದಗಿಸುತ್ತವೆ ಎಂದಿದ್ದರು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಅಂತಹ ಭರವಸೆಗಳು ಬರೀ ರಾಜಕೀಯ ಭರವಸೆಗಳು ಸರಕಾರ ಬಂದು 24 ತಿಂಗಳಿಗಿಂತ ಹೆಚ್ಚು ಕಾಲ ಗತಿಸಿದರು ಎಸ್.ಟಿ ಸಮುದಾಯಕ್ಕೆ 7.5 ಮಿಸಲಾತಿ ಒದಗಿಸಲು ಆಗಿಲ್ಲಾ ಎಂದು ಹೇಳಿದರು. ಶಾಸಕ ರಮೇಶ ಜಾರಕಿಹೊಳಿ ಅವರ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸತೀಶ ಉಪ್ಪಾರ ಸಮಾಜದ ಸಮಾರಂಭದಲ್ಲಿ ಭಾಷಣಕಾರರೊಬ್ಬರು ಜಾರಕಿಹೊಳಿ ಕುಟುಂಬಕ್ಕೆ ಸರಕಾರ ಉರಳಿಸುವ ಶಕ್ತಿಇದೆ ಎಂದಿದ್ದಕ್ಕೆ ಸ್ವಷ್ಟಿಕರಣ ನೀಡಿದ್ದೇನೆ . ಸರಕಾರ ಉರಳಿಸುವಲ್ಲಿ ಶಾಸಕ ರಮೇಶ ಅವರ ಪಾತ್ರ ಅಷ್ಟೆಇದೆ. ಇದು ನನಗೂ , ಬಾಲಚಂದ್ರ ಮತ್ತು ಲಖನ ಅವರಿಗೆ ಸಂಬಂಧವಿಲ್ಲ. ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಅರ್ಥದಲ್ಲಿ ಹೇಳಿದ್ದೇನೆ ಅಷ್ಟೇ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.

Related posts: