ಘಟಪ್ರಭಾ:ದಿ.08 ರಿಂದ “ಘಟಪ್ರಭಾ ಪ್ರೀಮಿಯರ ಲೀಗ್” ಕ್ರಿಕೆಟ್ ಪಂದ್ಯಾವಳಿ : ನವೀನ ಹೊಸಮನಿ ಮಾಹಿತಿ
ದಿ.08 ರಿಂದ “ಘಟಪ್ರಭಾ ಪ್ರೀಮಿಯರ ಲೀಗ್” ಕ್ರಿಕೆಟ್ ಪಂದ್ಯಾವಳಿ : ನವೀನ ಹೊಸಮನಿ ಮಾಹಿತಿ
ಘಟಪ್ರಭಾ ಅ 6: ನಗರದಲ್ಲಿ ನಾಲ್ಕನೆ ಬಾರಿಗೆ ಐ.ಪಿ.ಎಲ್ ಮಾದರಿಯಲ್ಲಿ (ಜಿ.ಪಿ.ಎಲ್) “ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿಯನ್ನು ಇಲ್ಲಿಯ ಎಸ್.ಡಿ.ಟಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಜಿ.ಪಿ.ಎಲ್ ಪಂದ್ಯಾವಳಿಗಳು ಇದೇ ದಿ.08 ರಿಂದ ಪ್ರಾರಂಭಗೊಳ್ಳಲಿದ್ದು, ಏಳು ಪ್ರಾಯೋಜಕರು, ಏಳು ತಂಡುಗಳು ಹಾಗೂ 91 ಆಟಗಾರರು ಭಾಗವಹಿಸಲಿದ್ದಾರೆ. ಸ್ಥಳೀಯ ಬಡ ಪ್ರತಿಭೆಗಳನ್ನು ಗುರುತಿಸುವ ಉದ್ದೇಶಕ್ಕಾಗಿ ಸ್ಥಳೀಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸೂರ್ಯ ಕ್ರಿಕೇಟ್ರ್ಸ್, ಗುಡ್ಡಿ ಪ್ಯಾಂಥರ್ಸ, ರೆಡ್‍ಲಾಯಿನ್ಸ್ ಘಟಪ್ರಭಾ, ಬಸವೇಶ್ವರ ಕ್ರಿಕೇಟ್ರ್ಸ್, ಮಲ್ಲಾಪೂರ ಬುಲ್ಸ್, ಡಿ.ಎಂ.ಡ್ರ್ಯಾಗನ್ಸ್, ಆರ್.ಎಸ್.ಕಿಂಗ್ಸ್ ತಂಡಗಳು ಭಾಗಿಯಾಗಲಿವೆ.
ಪಂದ್ಯಾವಳಿಗಳನ್ನು ಕಟ್ಟು ನಿಟ್ಟಾಗಿ ನಡೆಸಲು ಮೂರನೆ ನಿರ್ಣಾಯಕ (ಥರ್ಡ್ ಅಂಪಾಯರ್) ವ್ಯವಸ್ಥೆಯನ್ನು ಸ್ಥಳೀಯ ನ್ಯಾಯವಾದಿ ಹಾಗೂ ಪ.ಪಂ ಸದಸ್ಯ ಗಂಗಾಧರ ಬಡಕುಂದ್ರಿ ಇವರಿಂದ ಮಾಡಲಾಗಿದ್ದು, ಕ್ರೀಢಾಂಗಣದ ಸುತ್ತ 8 ಕ್ಯಾಮರಗಳನ್ನು ಅಳವಡಿಸಲಾಗುತ್ತಿದೆ.
ವಿಜೇತರಿಗೆ ಪ್ರಥಮ ಬಹುಮಾನವಾಗಿ ಗೋಕಾಕದ ಖ್ಯಾತ ಉದ್ಯಮಿ ಲಖನ ಲ.ಜಾರಕಿಹೊಳಿ ಅವರಿಂದ 45,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿ, ಪ್ರಥಮ ದರ್ಜೆ ಗುತ್ತಿಗೆದಾರ ಜಯಶೀಲ ಶೆಟ್ಟಿ ಇವರಿಂದ ದ್ವಿತೀಯ ಬಹುಮಾನವಾಗಿ 25,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿ, ಯುವ ಧುರೀಣ ಅಲ್ತಾಫ ಉಸ್ತಾದ ಇವರಿಂದ ಸರಣಿ ಶ್ರೇಷ್ಠ ಬಹುಮಾನವಾಗಿ 5000/ರೂ ನೀಡಲಾಗುವುದು ಎಂದು ಪ್ರಾಯೋಜಕರಾದ ನವೀನ ಹೊಸಮನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.