ಗೋಕಾಕ:ಸುರಕ್ಷಿತ ಪ್ರಯಾಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು : ಪಿಎಸ್ಐ ಎಂ.ಡಿ ಘೋರಿ
ಸುರಕ್ಷಿತ ಪ್ರಯಾಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು : ಪಿಎಸ್ಐ ಎಂ.ಡಿ ಘೋರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 27
ಸುರಕ್ಷಿತ ಪ್ರಯಾಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಶಹರ ಠಾಣೆ ಪಿಎಸ್ಐ ಎಂ.ಡಿ.ಘೋರಿ ಹೇಳಿದರು.
ಸೋಮವಾರದಂದು ಜಿಲ್ಲಾ ಪೊಲೀಸ್ ಇಲಾಖೆ, ಗೋಕಾಕ ಶಹರ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ರಸ್ತೆ ಸಂಚಾರ ನಿಯಮಗಳ ಅರಿವು ಕಾರ್ಯಕ್ರಮದ ನಿಮಿತ್ತ
ನಗರದ ಬಸ ನಿಲ್ದಾಣದ, ಕಾಲೇಜು ಸೇರಿದಂತೆ ವಿವಿಧ ಜನನಿಬಿಡು ಪ್ರದೇಶಗಳಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟವರು ವಾಹನ ಚಾಲನಾ ಪರವಾನಗಿ ಪಡೆದುಕೊಂಡೇ ವಾಹನ ಚಲಾಯಿಸಬೇಕು. ವಾಹನ ವಿಮೆ ಮಾಡಿಸಬೇಕು. ವಿಮೆ ಅವಧಿ ಮುಗಿದಿದ್ದರೆ ಮರು ವಿಮೆ ಮಾಡಿಸಬೇಕು ಎಂದು ಹೇಳಿದರು.
ವಾಹನ ಅಪಘಾತ ತಪ್ಪಿಸಲು ಸಾಮರ್ಥ್ಯಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ಒಯ್ಯಬಾರದು. ಬೈಕ್ ಮೇಲೆ ಮೂವರು ಸವಾರಿ ಮಾಡಬಾರದು ಎಂದ ಅವರು ನಗರದ ಜನನಿಬಿಡು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‍ಐ ಘೋರಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪೊಲೀಸ ಸಿಬ್ಬಂದಿಗಳು ಉಪಸ್ಥಿತರಿದ್ದರು.