RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಅವರ ನೇತೃತ್ವದಲ್ಲಿ ಜಿಲ್ಲೆಯ 18 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ : ನಳಿನ್ ಕುಮಾರ್ ಕಟಿಲ್

ಗೋಕಾಕ:ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಅವರ ನೇತೃತ್ವದಲ್ಲಿ ಜಿಲ್ಲೆಯ 18 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ : ನಳಿನ್ ಕುಮಾರ್ ಕಟಿಲ್ 

ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಅವರ ನೇತೃತ್ವದಲ್ಲಿ  ಜಿಲ್ಲೆಯ 18 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ : ನಳಿನ್ ಕುಮಾರ್ ಕಟಿಲ್

 

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 28 :

 
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲೆಯ  18 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟಿಲ ಹೇಳಿದರು.
ಬುಧವಾರದಂದು ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಜನಸ್ಪಂದನ ಹಾಗೂ ಗೋಕಾಕ ಮತಕೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2018 ರಲ್ಲಿ ಜಿಜಿಪಿ ಪಕ್ಷಕ್ಕೆ 108 ಬಂದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೂಡಿ ಅನೈತಿಕ ಸರಕಾರ ರಚಿಸಿದರು. ಜನಪರ ಕಾಳಜಿ ಮಾಡಬೇಕಾದ ಅಂದಿನ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೋಟೆಲ್ ನಿಂದ ಆಡಳಿತದಿಂದ ಶಾಸಕರು ಬೇಸತ್ತಿದ್ದರು ಇದನ್ನು ಕಂಡ ಶಾಸಕ ರಮೇಶ ಜಾರಕಿಹೊಳಿ ಬಂಡಾಯ ಎದ್ದು 17 ಶಾಸಕರನ್ನು ಕರೆದುಕೊಂಡು ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದರು ಆಗ ಮುಖ್ಯಮಂತ್ರಿಯಾದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಒಳ್ಳೆಯ ಕೆಲಸ ಮಾಡಿದರು, ಕೊವೀಡ ಸಂದರ್ಭದಲ್ಲಿ ಅನ್ನಭಾಗ್ಯ, ಆಸ್ಪತ್ರೆ ನೇಕಾರರಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ , ಕಲ್ಯಾಣ ಕರ್ನಾಟಕ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಈಗಿರುವ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಮಾಡುತ್ತಿದ್ದು, ಡಬ್ಬಲ ಇಂಜನ ಸರಕಾರ ಕರ್ನಾಟಕ ಮತ್ತು ದೇಶದಲ್ಲಿ ನಂ.1 ಕಾರ್ಯವಾಗುತ್ತಿದೆ. ಅಲ್ಲಿಂದ ನಡೆದ ಎಲ್ಲಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿದೆ . ಸಾರ್ವಜನಿಕ ಮುಂದಿನ ದಿನಗಳಲ್ಲಿ ಎಲ್ಲರೂ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
ಆರ್.ಎಸ್.ಎಸ್. ಸಂಘಟನೆ ನಿಷೇಧ ಮಾಡಬೇಕು ಎನ್ನುತ್ತಿರುವ ಸಿದ್ದರಾಮಯ್ಯನವರೆ ಕಾಂಗ್ರೆಸ್ ನಿಷೇಧ ಮಾಡುವ ಕಾಲ ಸನಿಹ ಬಂದಿದೆ. ಸಿದ್ದರಾಮಯ್ಯ ನವರ ಅಧಿಕಾರದಲ್ಲಿ ಇದ್ದಾಗ ಭಯೋತ್ಪಾದನೆ ಸಂಘಟನೆಗಳಾದ ಪಿ. ಎಫ ಐ, ಎಸ್.ಡಿ ಪಿ ಐ ಸಂಘಟನೆಗಳನ್ನು ನಿಷೇಧಿಸಲು ಸಾಧ್ಯವಾಗಲಿಲ್ಲ ಆ ಕಾರ್ಯ ಇಂದು ಬಿಜೆಪಿ ಸರಕಾರ ಮಾಡಿದೆ. 2014 ನಂತರ ಭಯೋತ್ಪಾದನೆ ನಿಯಂತ್ರಿಸುವ ಕಾರ್ಯ ಪ್ರಧಾನಿ ನರೇಂದ್ರ ಮೊದಿ ಮಾಡಿದ್ದಾರೆ. ಕಾಶ್ಮೀರ ರಾಜ್ಯವನ್ನು ಭಯೋತ್ಪಾದನೆ ಮುಕ್ತ ಮಾಡಿದೆ ಕೀರ್ತಿ ಬಿಜೆಪಿಗೆ ಸಲ್ಲಬೇಕು.
ಮಾಜಿ ಪ್ರಧಾನಿ ಲಾಲ ಬಹಾದ್ದೂರ್ ಶಾಸ್ತ್ರೀ ಅವರನ್ನು ಬಿಟ್ಟರೆ ,ನಂತರ ಅಧಿಕಾರ ಅನುಭವಿಸಿದ್ಧ ಮನಮೋಹನ್ ಸಿಂಗ ವರೆಗಿನ ಕಾಂಗ್ರೆಸ್ ಪ್ರಧಾನಿಗಳು ಹಲವಾರು ಹಗರಣ ಮಾಡಿದ್ದಾರೆ. ಇದರಿಂದ ರಾಷ್ಟ್ರ ವಿರೋಧಿ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಪಕ್ಷವನ್ನು ನಿರ್ಣಾಮ ಮಾಡಬೇಕು. ಭಯೋತ್ಪಾದನೆ ಮತ್ತು ಬ್ರಷ್ಟಾಚಾರ ಮುಕ್ತ ರಾಷ್ಟ್ರಮಾಡುವ ಕಾರ್ಯ ಮೋದಿ ಅವರು ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಿದಲ್ಲಿ ಇದ್ದಾಗ ಕರ್ನಾಟಕ ಲೂಟಿ ಮಾಡಿ ಡಿಕೆಶಿ ಜೈಲಿಗೆ ಹೋಗಿದ್ದರು. ಒಂದು ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅತೀ ಕೆಟ್ಟದಾಗಿ ಬೈದಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾಲಿಗೆ ಬಿದ್ದು ಪಕ್ಷದಲ್ಲಿ ಅಧಿಕಾರ ಉಪಯೋಗಿಸಿ ಪೆಮೆಂಟ ಮಾಡಿ ಮುಖ್ಯಮಂತ್ರಿಯಾಗಾದ್ದಾರೆ.
ಸಿದ್ದರಾಮಯ್ಯ ನವರು ಮಾಡಿದ ಎಲ್ಲಾ ಯೋಜನೆಗಳಲ್ಲಿ ಹಗರಣ ಮಾಡಿ ಜೈಲಿಗೆ ಹೋಗುವ ಭಯದಿಂದ ಲೋಕಾಯುಕ್ತವನ್ನು ಮುಚ್ಚಿದ್ದ ಸಿದ್ದರಾಮಯ್ಯ ನವರು ಒಬ್ಬ ನರಹಂತಕ ಮುಖ್ಯಮಂತ್ರಿ ಎಂದ ಆರೋಪಿಸಿದ ಕಟಿಲ್ ಅವರು ಇಡಿ ಜಗತ್ತು ಇಂದು ಭಾರತದ ಜೈ ಜೈ ಕಾರ ಹಾಕುತ್ತಿದೆ. ಜಗತ್ತಿನಲ್ಲಿ ಶಾಂತಿಯನ್ನು ಸೃಷ್ಟಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆ ಎಂದು ಎಲ್ಲಾ ರಾಷ್ಟ್ರದ ನಾಯಕರು ಮಾತನಾಡುತ್ತಿದ್ದಾರೆ ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವಾಗಿದೆ. ಕೊವಿಡ್ ನಲ್ಲಿ ಇಡೀ ಜಗತ್ತು ಭಾರತದಿಂದ ಔಷದಿ ಪಡೆದಿದೆ. ಜಗತ್ತಿನಲ್ಲಿ ಉಚಿತವಾಗಿ ಲಸಿಕೆ ನೀಡಿದ ರಾಷ್ಟ್ರ ವಿದ್ದರೆ ಅದು ಭಾರತ ದೇಶ ಒಟ್ಟಾರೆ ಮಗು ಹುಟ್ಟಿನಿಂದ ಸಾಯುವವರೆಗೆ ಯೋಜನೆಗಳನ್ನು ನೀಡಿ ಜನರನ್ನು ಆರೈಕೆ ಮಾಡುತ್ತಿರುವ ಸರಕಾರ ಯಾವುದಾದರೂ ಇದ್ದರು ಅದು ಮೋದಿ ನೇತೃತ್ವದ ಬಿಜೆಪಿ ಸರಕಾರ ಎಂದ ಅವರು ಮುಂದಿನ ಚುನಾವಣೆಯಲ್ಲಿ ಬಂಡೆ ಹೊಡೆಯುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತವೆ ಎಂದು ನಳಿನ್ ಕುಮಾರ್ ಕಟಿಲ್ ಹೇಳಿದರು.

ಕಾಂಗ್ರೆಸ್ ಜೋಡೊ ಯಾತ್ರೆ ಮಾಡಿ : ರಾಹುಲ್ ಗಾಂಧಿ ಅವರ ಭಾರತ ಜೋಡೊ ಪಾದಯಾತ್ರೆಯನ್ನು ಟಿಕಿಸಿದ ಕಟಿಲ ಅವರು ಭಾತರ ಜೊಡೋ ಬಿಡಿ ಕಾಂಗ್ರೆಸ್ ಜೋಡೋ ಕಾರ್ಯ ಮಾಡಿ . ಪಾರ್ಟಿಯಲ್ಲಿ ರಾಷ್ಟ್ರೀಯ ಒಬ್ಬ ರಾಷ್ಟ್ರೀಯ ಅಧ್ಯಕ್ಷ ಮಾಡುಲು ತಿನುಕಾಡುತ್ತಿದೆ. ಇವರಿಂದ ಮುಖ್ಯಮಂತ್ರಿ ಮಾಡಲು ಸಹ ಸಾಧ್ಯವಿಲ್ಲ. ಖರ್ಚಿಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಬಡಿದಾಡಿತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ನವರ ರಾಜಕೀಯ ಸನ್ಯಾಸವನ್ನು ಕೋಡುವದು ನಮ್ಮೆಲ್ಲರ ಗುರಿಯಾಗಿದೆ ಆದ್ದರಿಂದ ಎಲ್ಲರೂ ಮತ್ತೊಮ್ಮೆ ನಮ್ಮ ಜೊತೆ ಕೈ ಜೋಡಿಸಿ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ಬರುವ ಚುನಾವಣೆಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಪಾತ್ರ ಹೆಚ್ಚಿದೆ. ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿ ಪಕ್ಷ ಅಲ್ಲಾ , ಈ ದೇಶ ಮುಸ್ಲಿಂ ಮತ್ತು ಹಿಂದುಗಳದ್ದು, ಇಬ್ಬರೂ ಕೂಡಿ ದೇಶವನ್ನು ಕಟ್ಟುತ್ತಿದ್ದೇವೆ . ಬಿಜೆಪಿ ಪಕ್ಕದಲ್ಲಿ ಮುಸ್ಲಿಂ ಮತ್ತು ಹಿಂದುಗಳ ಪ್ರೀತಿಯಿಂದ ಇದ್ದು ಸಂಘಟನೆ ಮಾಡುತ್ತಿದ್ದಾರೆ.
ಕಾಂಗ್ರೆಸ ಪಕ್ಕದಲ್ಲಿ ಸಿಎಂ ಸ್ಥಾನಕ್ಕೆ ಇಬ್ಬರಲ್ಲಿ ಜಳಗ ಶುರುವಾಗಿದೆ. ಅವರ ಜಗಳ ಹತ್ತು ವರ್ಷ ಮುಗಿದರು ಮುಗಿಯುವದಿಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಶಾಹಕ ರಮೇಶ ಜಾರಕಿಹೊಳಿ ಅವರ ಮುಂದಾಳತ್ವದಲ್ಲಿ ಪಕ್ಷ ಗಟ್ಟಿಗೋಳಿಸೋಣ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ವಹಿಸಿದ್ದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಹಣುಮಂತ ನಿರಾಣಿ, ಸಂಸದೆ ಮಂಗಳಾ ಅಂಗಡಿ, ಪಕ್ಷದ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಸೇರಿದಂತೆ ಇತರ ನಾಯಕರು ಮಾತನಾಡಿ ಭಾರತೀಯ ಜನತಾ ಪಕ್ಷ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ 15೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಕ್ಷದ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿ ಮುಂಚೂಣಿಯಲ್ಲಿದ್ಧು ಕಾರ್ಯಮಾಡಬೇಕು ಎಂದು ಹೇಳಿದರು‌.

ಇದೇ ಸಂದರ್ಭದಲ್ಲಿ ನಮ್ಮ ಆಫ್ ನಮೋ ಆಫ್ ಬಿಡುಗಡೆ ಗೊಳಿಸಿದರು ಕಾರ್ಯಕ್ರಮಕ್ಕೂ ಮೊದಲು ಗೋವಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಕ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಲಕ್ಷ್ಮಣ ತಪಸಿ, ಮಹೇಶ ತೆಂಗಿನಕಾಯಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಸುಭಾಷ್ ಪಾಟೀಲ, ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಶಫೀ ಜಮಾದಾರ, ಸುರೇಶ ಕಾಡದವರ, ಜಯಾನಂದ ಮುನವಳ್ಳಿ, ಚಂದ್ರಶೇಖರ್ ಕವಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: