ಗೋಕಾಕ:ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ದೇಶಾದ್ಯಂತ ಇನ್ನರವ್ಹೀಲ್ ಸಂಸ್ಥೆ ಮಾಡುತ್ತಿದೆ : ಚೇರಮನ್ ಮಹಾನಂದಾ ಚಂದರಗಿ
ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ದೇಶಾದ್ಯಂತ ಇನ್ನರವ್ಹೀಲ್ ಸಂಸ್ಥೆ ಮಾಡುತ್ತಿದೆ : ಚೇರಮನ್ ಮಹಾನಂದಾ ಚಂದರಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 29 :
ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ದೇಶಾದ್ಯಂತ ಇನ್ನರವ್ಹೀಲ್ ಸಂಸ್ಥೆ ಮಾಡುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ಚೇರಮನ್ ಮಹಾನಂದಾ ಚಂದರಗಿ ಹೇಳಿದರು
ಬುಧವಾರದಂದು ನಗರದ ಲಕ್ಷ್ಮೀ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರವ್ಹಿಲ್ ಸಂಸ್ಥೆಯಿಂದ ನಿರ್ಮಿಸಲಾದ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯು ಶೈಕ್ಷಣಿಕ ಪ್ರಗತಿಗಾಗಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗದಿಂದ ಪ್ರತಿಭಾವಂತರಾಗಿ. ಇಲ್ಲಿನ ಇನರವ್ಹಿಲ್ ಸಂಸ್ಥೆಯು ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾದರಿಯಾಗಿ ಮಾಡುತ್ತಿದು ಇನ್ನು ಹೆಚ್ಚಿನ ಕಾರ್ಯಗಳನ್ನು ಮಾಡುವರೊಂದಿಗೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲೆಂದು ಆಶಿಸಿದರು.
ಈ ಸಂದರ್ಭದಲ್ಲಿ ಇನ್ನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಆರತಿ ನಾಡಗೌಡ, ಕಾರ್ಯದರ್ಶಿ ಸೀತಾ ಬೆಳಗಾವಿ, ಖಜಾಂಚಿ ವಂದನಾ ವರದಾಯಿ, ರೋಟರಿ ಸಂಸ್ಥೆಯ ಸತೀಶ ನಾಡಗೌಡ , ಸೋಮಶೇಖರ್ ಮಗದುಮ್ಮ, ಬಿಇಒ ಜಿ.ಬಿ.ಬಳಗಾರ, , ಮುಖ್ಯೋಪಾಯ ಎಸ್.ಎ ಮುತಾಲಿಕ್ ದೇಸಾಯಿ, ಎಇಇ ಅಶ್ವಿನ, ಬಿ.ಎನ್.ಶಿಂಗಾಡಿ ಸೇರಿದಂತೆ ಅನೇಕರು ಇದ್ದರು.