RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೆ ಶುಶ್ರೂಕರ ಪಾತ್ರ ಮಹತ್ವದಾಗಿದೆ : ರಾಜಶೇಖರ ಹಿರೇಮಠ

ಗೋಕಾಕ:ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೆ ಶುಶ್ರೂಕರ ಪಾತ್ರ ಮಹತ್ವದಾಗಿದೆ : ರಾಜಶೇಖರ ಹಿರೇಮಠ 

ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೆ ಶುಶ್ರೂಕರ ಪಾತ್ರ ಮಹತ್ವದಾಗಿದೆ : ರಾಜಶೇಖರ ಹಿರೇಮಠ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 30 :

 
ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೆ ಶುಶ್ರೂಕರ ಪಾತ್ರ ಮಹತ್ವದಾಗಿದೆ ಎಂದು ಉಪನ್ಯಾಸಕ ರಾಜಶೇಖರ ಹಿರೇಮಠ ಹೇಳಿದರು.

ನಗರದ ರೋಟರಿ ರಕ್ತ ಬಂಡಾರ ಸಭಾಂಗಣದಲ್ಲಿ ಇಲ್ಲಿನ ಕೆ.ಎಲ್.ಇ ಸಂಸ್ಥೆಯ ಇನಸ್ಟಿಟ್ಯೂಟ್ ಆಫ ನರ್ಸಿಂಗ್ ಸೈನ್ಸ ನ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಸೇವಾ ಮನೋಭಾವದಿಂದ ರೋಗಿಗಳ ಸೇವೆ ಮಾಡುವಂತೆ ಕರೆ ನೀಡಿದರು.
ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನೋಳಿ ಮಾತನಾಡಿ ನರ್ಸಿಂಗ್ ಪೂರೈಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ಇದ್ದು, ಈ ಕ್ಷೇತ್ರದ ಆಯ್ಕೆಯೊಂದಿಗೆ ಉದ್ಯೋಗವಂತರಾಗಿ ಸ್ವಾವಲಂಭಿ ಜೀವನವನ್ನು ನಡೆಸುವಂತೆ ಹೇಳಿದರು.
ವೇದಿಕೆಯ ಮೇಲೆ ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಪ್ರಾಚಾರ್ಯ ಆನಂದ ಜಿ.ಎಚ್ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related posts: