ಗೋಕಾಕ:ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಿ : ಮೌಲಾನ ಅಬ್ದುಸಮಿ ತೆರದಾಳ
ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಿ : ಮೌಲಾನ ಅಬ್ದುಸಮಿ ತೆರದಾಳ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 3 :
ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು ಎಂದು ಇಲ್ಲಿನ ಮೌಲಾನ ಅಬ್ದುಸಮಿ ತೆರದಾಳ ಹೇಳಿದರು
ಸೋಮವಾರದಂದು ನಗರದ ತಂಜೀಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಉಚಿತ ಸುನ್ನತೆ ಇಬ್ರಾಹಿಂ (ಖತನಾ) ಕ್ಯಾಂಪಗೆ ಚಾಲನೆ ನೀಡಿ ಅವರು ಮಾತನಾಡಿದರು
ಆಧಾತ್ಮ ಮತ್ತು ಶಿಕ್ಷಣ ಒಂದೇ ನಾನ್ಯದ ಎರೆಡು ಮುಖಗಳು ಆದಾತ್ಮದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಮಕ್ಕಳನ್ನು ಸಾಮಾಜದ ಮುಖ್ಯವಾಹಿನಿಗೆ ತರಲು ಪಾಲಕರು ಸಹಕರಿಸಿದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ . ಕಳೆದ 17 ವರ್ಷಗಳಿಂದ ಇಲ್ಲಿಯ ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಸಂಸ್ಥೆಯು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಶ್ಲಾಘನೀಯ ಅವರ ಈ ಸಮಾಜಿಕ ಕಾರ್ಯ ಹೀಗೆಯೇ ಮುಂದುವರೆಯಲ್ಲಿ ಎಂದು ಶುಭ ಹಾರೈಸಿದರು.
ಮುಂಜಾನೆಯಿಂದ ನಡೆದ ಉಚಿತ ಶಿಬಿರದಲ್ಲಿ ಸುಮಾರು 300 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಈ ಶಿಬಿರದ ಸದುಉಪಯೋಗ ಪಡೆದುಕೊಂಡರು
ಈ ಸಂದರ್ಭದಲ್ಲಿ ಸಂಸ್ಥೆಯ ಮುಖಂಡರಾದ ಅಬ್ಬಾಸ ಕೆ ದೇಸಾಯಿ , ಸಾಧಿಕ ಹಲ್ಯಾಳ, ಮಹಾರಾಷ್ಟ್ರ ಸಾಂಗಲಿಯ ಡಾ.ಇಕಬಾಲ ಶರೀಕಮಸಲತ್ತ , ಡಾ. ಇಸಾಕ ಔರಂಗವಾಲೇ ಹಿರಿಯ ನಗರಸಭೆ ಅಬ್ದುಲರಹೆಮಾನ ದೇಸಾಯಿ , ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ, ಮುಸ್ತಾಕ ಖಂಡಾಯತ, ನೂರೆಇಲಾಹಿ ಜಮಾದಾರ, ಮಲ್ಲಿಕ ಸನದಿ, ಇಮ್ರಾನ್ ಸನದಿ , ಜಾಹಾಂಗೀರ ಜಮಾದಾರ, ಖಾಜಾ ಮತ್ತೆ , ಮುಗುಟ ಪೈಲವಾನ , ಮೊಶಿನ ಮಕಾನದಾರ , ಅಬ್ಬು ಮುಜಾವರ , ಇಮ್ರಾನ್ ಗೋಟೇದ, ರಪೀಕ ಗುಳೇದಗುಡ್ಡ , ಮುನ್ನಾ ಮತ್ತೆ , ದಾದಾಪೀರ ಪೀರಜಾದೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು