ಬೆಳಗಾವಿ:ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಸ್ಮಾರ್ಟ್ ಸಿಟಿ ಕೆಲಸ ಮಾಡಬೇಡಿ : ಶಂಕರಗೌಡ ಪಾಟೀಲ
ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಸ್ಮಾರ್ಟ್ ಸಿಟಿ ಕೆಲಸ ಮಾಡಬೇಡಿ : ಶಂಕರಗೌಡ ಪಾಟೀಲ
ಬೆಳಗಾವಿ ಅ 6: ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಸ್ಮಾರ್ಟ್ ಸಿಟಿ ಕೆಲಸ ಮಾಡಬೇಡಿ ಎಂದು ಬಿಜೆಪಿ ನಾಯಕ ಶಂಕರಗೌಡ ಪಾಟೀಲ ತಿಳುವಳಿಕೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ವಚ್ಛ ಸುಂದರ ಸುಸಜ್ಜಿತ ನಗರಗಳ ನಿರ್ಮಾಣಕ್ಕಾಗಿ ಕೇಂದ್ರ ಸರಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಾರಂಭಮಾಡಲು ವಿಳಂಬ ಏಕೆ ಎಂದು ಪ್ರಶ್ನಿಸಿದರು.
ಸಿಟಿಯಲ್ಲಿ ಮೊದಲು ರಿಂಗ್ ರಸ್ತೆಗಳ ನಿರ್ಮಾಣ ಆಗಬೇಕೆಂದು ಒತ್ತಾಯಿಸಿದರು. ರಾಜ್ಯ ಸರಕಾರದ ತನ್ನ ಬಜೆಟ್ ನಲ್ಲಿ ಸಂಚಾರ ಸಮಸ್ಯೆಗೆ ನೀಗಿಸಲು ಮೊದಲು ರಿಂಗ್ ರಸ್ತೆ ನಿರ್ಮಾಣ ಮಾಡಲಿ. ನಗರದಲ್ಲಿ ಪೊಲೀಸಿಂಗ್ ಅನ್ನೋದೆ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ. ಅಂಥವರಿಗೆ ಆಧಾರ ಕಾಡ್, ರೇಷನ್ ಕಾರ್ಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಧಿಕಾರಿಗಳು ನೀಡುತ್ತಿರುವುದು ವಿಸ್ಮಯ ಎಂದರು. ಬೆಳಗಾವಿ ನಗರದಲ್ಲಿರುವ ನಾಲಾಗಳ ನುಂಗುವವರಿಂದ ರಕ್ಷಣೆ ಮಾಡಿ ಎಂದರು.
ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಟೋಪಣ್ಣವರ ಮಾತನಾಡಿ ನಾಲೆಯ ವಿಚಾರದಲ್ಲಿ ಬುಡಾ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಶಾಸಕ ಫಿರೋಜ್ ಸೇಠ್ ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಹಾಗಾದರೆ ಸರ್ವೆ ನಡೆಸಿದ ವರದಿಯನ್ನು ಅಧಿಕಾರಿಗಳು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜು ಚಿಕ್ಕನಗೌಡರ ಹಾಜರಿದ್ದರು.