RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಬಿಇಒ ಬಳಗಾರ

ಗೋಕಾಕ:ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಬಿಇಒ ಬಳಗಾರ 

ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಬಿಇಒ ಬಳಗಾರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :
ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.

ರವಿವಾರದಂದು ನಗರದ ಜೆ.ಎಸ್.ಎಸ್.ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಮೂಡಲಗಿಯ ಸ್ನೇಹ ಸಂಕುಲ ಸಂಸ್ಥೆಯಿಂದ ಮಾರುತಿ ದಾಸಣ್ಣವರ ರಚಿಸಿದ ಅಕ್ಕತಂಗ್ಯಾರು ಕಥಾ ಸಂಕಲನ ಹಾಗೂ ಕಣ್ಣಹಿಂದಿನ ಕಡಲು ಕವನ ಸಂಕಲನಗಳನ್ನು ಬಿಡುಗಡೆ ಗೋಳಿಸಿ ಅವರು ಮಾತನಾಡುತ್ತಾ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯುವ ಪೀಳಿಗೆಯಲ್ಲಿ ಸಾಹಿತ್ಯದ ಜಾಗೃತಿ ಮೂಡಿಸಿ ಸಾಹಿತ್ಯ ಕ್ಷೇತ್ರವನ್ನು ಬೆಳಸಬೇಕಾಗಿದೆ ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಮೂಡಲಗಿಯ ಸಾಹಿತಿ ಪ್ರೋ.ಸಂಗಮೇಶ ಗುಜಗುಂಡ ಆಧುನಿಕತೆಯ ಬದಲಾವಣೆಯಿಂದ ಸಾಂಸ್ಕೃತಿಕ ಪಲ್ಲಟವನ್ನು ಕವಿ ಮಾರುತಿ ದಾಸನ್ನವರ ಅತ್ಯಂತ ನೈಜವಾಗಿ ಚಿತ್ರಿಸಿದ್ದಾರೆ. ಮಾನವೀಯತೆ ಮರೆಯಾಗುತ್ತಿರುವದನ್ನು ಮನೋವೈಜ್ಞಾನಿಕವಾಗಿ ಹಲವಾರು ಸಂದೇಶಗಳ ಮೂಲಕ ನೀಡಿದ್ದಾರೆ. ಜೀವನದ ರಸಾಯನ ಶಾಸ್ತ್ರವನ್ನು ಈ 8 ಕಥೆಗಳು ಪ್ರತಿನಿಧಿಸುತ್ತಾ ಓದುಗರನ್ನು ಆಕರ್ಷಿಸಿ ಗಟ್ಟಿತನ ವೈಶಿಷ್ಟ್ಯದಿಂದ ಓದಿಸಿಕೊಂಡು ಹೋಗುತ್ತವೆ ಇಂತಹ ಕೃತಿಗಳು ಅವರಿಂದ ಇನ್ನು ಹೆಚ್ಚು ಬರಲಿ ಎಂದು ಹಾರೈಸಿದರು.

ಮುಖ್ಯ ಅತಿಯಾಗಿ ಆಗಮಿಸಿದ್ದ ಬೆಂಗಳೂರಿನ ಕವಿ ವಾಸುದೇವ ನಾಡಿಗ ಮಾತನಾಡಿ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿ ಸಮಾಜ ಸುಧಾರಣೆಯಾಗುವಂತಹ ಸಾಹಿತ್ಯದ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿದ್ದ ಪ್ರೋ.ಚಂದ್ರಶೇಖರ್ ಅಕ್ಕಿ ಮಾತನಾಡುತ್ತಾ ಇಂದಿನ ಯುವ ಜನಾಂಗ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ಕನ್ನಡ ‌ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಮಾರುತಿ ದಾಸಣ್ಣವರ , ಬಿಇಒಗಳಾದ ಪ್ರಕಾಶ ಹಿರೇಮಠ, ರೇವತಿ ಹಿರೇಮಠ, ವಿವಿಧ ವೇದಿಕೆಗಳ ಮುಖ್ಯಸ್ಥರುಗಳಾದ ಭಾರತಿ ಮದಬಾಂವಿ, ಸಂಗೀತಾ ಬನ್ನೂರ, ಶಿವಲೀಲಾ ಪಾಟೀಲ, ಶಿವಾನಂದ ಅಂಗಡಿ, ಬಸವರಾಜ ಮುರಗೋಡ, ಜಯಾನಂದ ಮಾದರ, ವಿದ್ಯಾ ರೆಡ್ಡಿ, ದುರ್ಗಪ್ಪ ದಾಸಣ್ಣವರ ಇದ್ದರು.
ಸಾಹಿತಿ ಮಹಾದೇವ ಜಿಡ್ಡಿಮನಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಾಯ್.ಬಿ ಕಳ್ಳಿಗುದ್ದಿ ನಿರೂಪಿಸಿ, ವಂದಿಸಿದರು.

Related posts: