RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಕಟ್ಟಿಮನಿ ಅವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಹಿತಿಯಾಗಿ ನಾಡಿಗೆ ನೀಡಿದ ಸೇವೆ ಅಪಾರವಾಗಿದೆ : ಪ್ರೋ ಅಕ್ಕಿ

ಗೋಕಾಕ:ಕಟ್ಟಿಮನಿ ಅವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಹಿತಿಯಾಗಿ ನಾಡಿಗೆ ನೀಡಿದ ಸೇವೆ ಅಪಾರವಾಗಿದೆ : ಪ್ರೋ ಅಕ್ಕಿ 

ಕಟ್ಟಿಮನಿ ಅವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಹಿತಿಯಾಗಿ ನಾಡಿಗೆ ನೀಡಿದ ಸೇವೆ ಅಪಾರವಾಗಿದೆ : ಪ್ರೋ ಅಕ್ಕಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 23 :
ಬಸವರಾಜ ಕಟ್ಟಿಮನಿಯವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಹಿತಿಯಾಗಿ ನಾಡಿಗೆ ನೀಡಿದ ಸೇವೆ ಅಪಾರವಾಗಿದೆ ಎಂದು ಪ್ರೋ ಚಂದ್ರಶೇಖರ್ ಅಕ್ಕಿ ಹೇಳಿದರು.

ರವಿವಾರದಂದು ನಗರದಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ ವತಿಯಿಂದ ಬಸವರಾಜ ಕಟ್ಟಿಮನಿ ಅವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕಷ್ಟಕರವಾದ ಜೀವನದಲ್ಲಿ ಸ್ವಾಭಿಮಾನಿಯಾಗಿ ಕಠಿಣ ಪರಿಶ್ರಮದಿಂದ ಸಾಧಕರಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೃತಿಗಳನ್ನು ನೀಡಿ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದ್ದ ಅವರು ನೇರ ದಿಟ್ಟವಾಗಿ ವಾಸ್ತವ ಬರವಣೆಯ ಮೂಲಕ ಶೋಷಣೆಯ ಬ್ರಿಟಿಷರ ವಿರುದ್ಧ ಹೋರಾಡಿದ್ದರು ಅಂತಹ ಬಸವರಾಜ ಕಟ್ಟಿಮನಿ ಅವರ ಬಾಳು ಇಂದು ನಮ್ಮೆಲ್ಲರಿಗೂ ಮಾದರಿಯಾಗಬೇಕು.
ಜ್ವಾಲಾಮುಖಿ ಮೇಲೆ ಮತ್ತು ಜರತಾರಿ ಜಗದ್ಗುರು ಎಂಬ ಕಾದಂಬರಿಗಳನ್ನು ಬರೆದು ಸಾಮಾಜದಲ್ಲಿ ಬರವಣಿಗೆ ಕ್ರಾಂತಿಯನ್ನು ಸೃಷ್ಟಿಸಿಜ ಮೇದಾವಿ ಸಾಹಿತಿ ಕಟ್ಟಮನಿ ಅವರು ಬರದಂತೆ ಬದುಕಿ, ಬದುಕಿದಂತೆ ಬರೆದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಕರಪತ್ರಗಳನ್ನು ಹಂಚಿ ಜನರಲ್ಲಿ ಬ್ರಿಟಿಷ್ರ ವಿರುದ್ಧ ಜಾಗೃತಿಯನ್ನು ಮೂಡಿಸಿ ಸ್ವಾತಂತ್ರ್ಯ ಹೋರಾಟ ಮಾಡಿದರು. ಹೋರಾಟದ ಸಂದರ್ಭದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಅಲ್ಲಿ ಅನೇಕ ಹೋರಾಟಗಾರರ ಪರಿಚಯಿಸಿಕೊಂಡು ಜೈಲಿನಲ್ಲಿ ಕುಳಿತು ಹಲವಾರು ಕಥೆಗಳನ್ನು ಬರೆದರು. 10 ಕಥಾ ಸಂಕಲ, 40 ಕಾದಂಬರಿಗಳು 2 ಕವನ ಸಂಕಲನ ಸೇರಿದಂತೆ ಅನೇಕ ರೀತಿಯಲ್ಲಿ ಸಾಹಿತ್ಯವನ್ನು ಬರೆದು ನಾಡು ಮರೆಯಲಾರದಂತಹ ಕೋಡುಗೆಯನ್ನು ಸಾಹಿತ್ಯ ಲೋಕ ನೀಡಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿ ಬಾಳಾಸಾ‌ಹೇಬ ಲೋಕಾಪೂರೆ ಮಾತನಾಡಿ ಕನ್ನಡ ಸಾಹಿತ್ಯದ ಪರಂಪರೆಯ ಹಿರಿಯ ಎಂಬ ಹೆಗ್ಗಳಿಕೆಗೆ ಬಸವರಾಜ ಕಟ್ಟಿಮನಿ ಪಾತ್ರರಾಗಿದ್ದರು. ಅವರು ನೀಡಿ ಹೋದ ಸಾಹಿತ್ಯದ ಪ್ರತಿಫಲವಾಗಿ ಇಂದು ನಾವು ಸಾಹಿತ್ಯವನ್ನು ರಚಿಸುತ್ತಿದ್ದೆವೆ ಇಂದಿನ ಸಾಹಿತಿ ಮತ್ತು ಸಾಹಿತಿಗಳಿಗೆ ಬಹುದೊಡ್ಡ ದೊಡ್ಡ ಮಾರ್ಗವನ್ನು ಕಟ್ಟಿಮನಿ ಅವರು ಹಾಕಿ ಹೋಗಿದ್ದಾರೆ. ಅವರು ಬಿಟ್ಟು ಹೋದ ಸಾಹಿತ್ಯದ ಫಲವಾಗಿ ಇಂದು ಸೃಜನಶೀಲ ಕಾವ್ಯ ಕಥೆ ಕಾದಂಬರಿಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ತಾಲೂಕಿನ 40 ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ನಿಧನರಾದ ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು‌.

ವೇದಿಕೆಯಲ್ಲಿ ಬಸವರಾಜ ಕಟ್ಟಿಮನಿ ಅವರ ಒಡನಾಡಿ ಹಿರಿಯ ಜೀವಿ ಬಾಳಗೌಡ ಪಾಟೀಲ, ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನೋಳಿ, ಮಹಾಂತೇಶ ತಾವಂಶಿ, ಶಿವಕುಮಾರ ಕಟ್ಟಿಮನಿ,ಸೋಮಶೇಖರ್ ಬಾಳೋಜಿ, ಸುರೇಶ್ ಮುದ್ದಾರ ಉಪಸ್ಥಿತರಿದ್ದರು.

Related posts: