ಗೋಕಾಕ:ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಬಿಇಒ ಬಳಗಾರ ಚಾಲನೆ
ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಬಿಇಒ ಬಳಗಾರ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 28 :
ಗೋಕಾಕ ಶೈಕ್ಷಣಿಕ ವಲಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೋಟಿ ಕಂಠ ಗಾಯನ ಕಾರ್ಯಕ್ರಮವು ಶುಕ್ರವಾರದಂದು ನಡೆಯಿತು
ಸಮೀಪದ ಗೋಕಾಕ ಫಾಲ್ಸ್ ನ ದಿ ವೋಲ್ಕ್ಯಾರ್ಟ್ ಅಕ್ಯಾಡಮಿ ಶಾಲಾ ಆವರಣದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೋಠಿ ಕಂಠ ಗಾಯನದ ಮೂಲಕ ಸರಕಾರ ನಾಡು-ನುಡಿ, ಭಾಷೆಯ ಬಗ್ಗೆ ಗೌರವನ್ನು ಹೆಚ್ಚಿಸಿದೆ. ಬರೀ ನವೆಂಬರ್ ತಿಂಗಳಲ್ಲಿ ಕನ್ನಡದ ಪ್ರೀತಿಯನ್ನು ತೋರದೆ ವರ್ಷವಿಡಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗೋಕಾಕ ವಲಯದ ವಿದ್ಯಾರ್ಥಿಗಳು ಜಯ ಭಾರತ ಜನನೀಯ ತನುಜಾತೆ, ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು, ಬಾರಿಸು ಕನ್ನಡ ಡಿಮ್‍ಡಿಮ್‍ವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಎಂಬ ನಾಡ ಭಕ್ತಿ ಗೀತೆಗಳನ್ನು ಒಟ್ಟು ಆರು ಕನ್ನಡ ಹಾಡುಗಳನ್ನ ಏಕಕಾಲಕ್ಕೆ ಹಾಡಿ ಕನ್ನಡಿಗರ ಹುಮ್ಮಸ್ಸುನ್ನು ಇಮ್ಮಡಿಗೊಳಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ಬಿ.ಪಾಟೀಲ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.