ಗೋಕಾಕ: ಶ್ರಮಜೀವಿಗಳಾದ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿ : ಅಂಬಿರಾವ ಪಾಟೀಲ
ಶ್ರಮಜೀವಿಗಳಾದ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿ : ಅಂಬಿರಾವ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 28 :
ಶ್ರಮಜೀವಿಗಳಾದ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಅವರು, ಶುಕ್ರವಾರದಂದು ನಗರದ ಗೋಕಾಕ ತಾಲೂಕ ಕಟ್ಟಡ ಮತ್ತು ಕಟ್ಟಡ ಸಾಮಗ್ರಿಗಳ ಲೋಡಿಂಗ ಮತ್ತು ಅನ್ ಲೋಡಿಂಗ ಹಮಾಲಿ ಕಾರ್ಮಿಕರ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣೆ ಹಾಗೂ ಕಾರ್ಮಿಕ ಇಲಾಖೆಯಿಂದ ನೀಡಲಾದ ಮದುವೆ ಧನ ಸಹಾಯ ಬಾಂಡಗಳನ್ನು ವಿತರಿಸಿ ಮಾತನಾಡಿದರು.
ಕಾರ್ಮಿಕರು ದುಷ್ಟಗಳಿಂದ ದೂರವಿದ್ದು, ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಎಲ್ಲರೂ ಸಂಘಟಿತರಾಗಿ ಸಂಘದ ಸಹಕಾರದಿಂದ ಆರ್ಥಿಕವಾಗಿ ಸದೃಢರಾಗಿ ತಮ್ಮ ಶ್ರಮದ ದುಡಿಮೆಯಲ್ಲಿ ಸ್ವಲ್ಪ ಉಳಿತಾಯ ಮಾಡುವ ಮನೊಭಾವ ಬೆಳೆಸಿಕೊಳ್ಳಿ. ತಮ್ಮ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುವೊಂದಿಗೆ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಕಾರ್ಮಿಕ ನೀರಿಕ್ಷಕ ಪಾಂಡುರಂಗ ಮಾವರಕರ, ಅಶೋಕ ಮೇಸ್ತ್ರಿ, ಚಿದಾನಂದ ದೇಮಶೆಟ್ಟಿ, ಸಂಘದ ಅಧ್ಯಕ್ಷ ಬಸವರಾಜ ಆರೇನ್ನವರ, ಪದಾಧಿಕಾರಿಗಳಾದ ನಾಗಪ್ಪ ಮೇಸ್ತ್ರಿ, ಯಲ್ಲಪ್ಪ ಮೇಸ್ತ್ರಿ, ಯಲ್ಲಪ್ಪ ಪಾಟೀಲ, ಪ್ರಕಾಶ ಕಳ್ಳಿಮನಿ, ಗಣಪತಿ ಉಳ್ಳಾಗಡ್ಡಿ, ಹನಮಂತ ದೊಡ್ಡಮನಿ, ಶೆಟ್ಟೆಪ್ಪ ಮೇಸ್ತ್ರಿ, ಪರಸಪ್ಪ ಆರೆನ್ನವರ, ಲಕ್ಕಪ್ಪ ಮುದ್ದೆಪ್ಪಗೋಳ ಸೇರಿದಂತೆ ಅನೇಕರು ಇದ್ದರು.