ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಸದೃಢ ಆರೋಗ್ಯದೊಂದಿಗೆ ಪರಸ್ಪರರಲ್ಲಿ ಪ್ರೀತಿ ,ವಿಶ್ವಾಸ ಹೆಚ್ಚುತ್ತದೆ: ಸನತ ಜಾರಕಿಹೊಳಿ
ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಸದೃಢ ಆರೋಗ್ಯದೊಂದಿಗೆ ಪರಸ್ಪರರಲ್ಲಿ ಪ್ರೀತಿ ,ವಿಶ್ವಾಸ ಹೆಚ್ಚುತ್ತದೆ: ಸನತ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 29 :
ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಸದೃಢ ಆರೋಗ್ಯದೊಂದಿಗೆ ಪರಸ್ಪರರಲ್ಲಿ ಪ್ರೀತಿ ,ವಿಶ್ವಾಸ ಹೆಚ್ಚುತ್ತದೆ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾಜ್ಯೋತ್ಸವದ ನಿಮಿತ್ತ ನಗರಸಭೆ ವತಿಯಿಂದ ಆಯೋಜಿಸಲಾದ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ಯುವ ಪೀಳಿಗೆ ಕ್ರೀಡಗಳಿಗೂ ಹೆಚ್ಚಿನ ಮಹತ್ವ ನೀಡುವದರಿಂದ ಮಾನಸಿಕವಾಗಿ ಸದೃಢರಾಗಿರಿ, ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನದ ಮೂಲಕ ಸಾಧನೆ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸುರೇಶ್ ಸನದಿ, ಪೌರಾಯುಕ್ತ ಶಿವಾನಂದ ಹಿರೇಮಠ, ಹಿರಿಯ ನಗರಸಭೆ ಸದಸ್ಯ ಅಬ್ಬಾಸ್ ದೇಸಾಯಿ, ದುರ್ಗಪ್ಪ ಶಾಸ್ತ್ರಿ ಗೋಲ್ಲರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.