RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ರಾಜ್ಯೋತ್ಸವ ಕರ್ನಾಟಕ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದೆ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

ಗೋಕಾಕ:ರಾಜ್ಯೋತ್ಸವ ಕರ್ನಾಟಕ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದೆ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ 

ರಾಜ್ಯೋತ್ಸವ ಕರ್ನಾಟಕ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದೆ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

 

ನಮ್ಮ ಬೆಳಗಾವಿ ಇ – ವಾರ್ತೆರ ಗೋಕಾಕ ನ 1 :
ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕು ಎಂಬ ಕನಸು ನನಸಾಗಿ ಇಂದಿಗೆ 66 ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ 67ನೇ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ಮಂಗಳವಾರದಂದು ತಾಲೂಕಾ ಆಡಳಿತ ವತಿಯಿಂದ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಖಂಡ ಕರ್ನಾಟಕ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರು ಕೈ ಜೊಡಿಸೊಣ ಕನ್ನಡ ನಾಡು, ನುಡಿ, ಜಲ ನೆಲ, ಸಂರಕ್ಷಣೆಗೆ ಪಣ ತೊಡೊಣ ನಾವೆಲ್ಲರು ಒಂದಾಗಿ ಕನ್ನಡ ತೇರನ್ನು ಮುನ್ನಡೆಸೊಣಾ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುಂಚೆ ನಗರದ ಮಿನಿ ವಿಧಾನ‌ಸೌಧದಿಂದ ಕನ್ನಡಾಂಬೆಯ ಭಾವಚಿತ್ರದೊಂದಿಗೆ ರೂಪಕಗಳು, ಶಾಲಾ ಮಕ್ಕಳು , ಶಿಕ್ಷಕರು, ಗಣ್ಯರು , ಅಧಿಕಾರಿಗಳನ್ನೊಳಗಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇದೇ ಸಂದರ್ಭದಲ್ಲಿ ಸಾಹಿತಿ ಪ್ರಕಾಶ ಕೋಟಿನತೋಟ, ಹಿರಿಯ ಕಲಾವಿರಾದ ಉದ್ದಪ್ಪ ಮದಹಳ್ಳಿ, ಸಿದಪ್ಪ ಮಂಗಿ ಅವರಿಗೆ ತಾಲೂಕು ಆಡಳಿತ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಕಸಾಪ ತಾಲೂಕ ಅಧ್ಯಕ್ಷೆ ಭಾರತಿ ಮದಬಾಂವಿ, ಬಿಇಒ ಜಿ.ಬಿ.ಬಳಗಾರ , ಸಿಪಿಐ ಗೋಪಾಲ ರಾಠೋಡ, ಉಪ ತಹಶೀಲ್ದಾರ ಎಲ್‌.ಎಚ್.ಭೋವಿ, ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನವರ , ಕಿರಣ ಢಮಾಮಗರ, ಆರೋಗ್ಯ ಅಧಿಕಾರಿ ಡಾ.ಎಂ.ಎಸ್.ಕೊಪ್ಪದ, ಗಣ್ಯರಾದ ಅಶೋಕ್ ಪೂಜಾರಿ, ಸೋಮಶೇಖರ್ ಮಗದುಮ್ಮ ಇದ್ದರು.

Related posts: