RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ರವಿವಾರಂದು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಗೋಕಾಕದಲ್ಲಿ ಬೃಹತ್ ಸಮಾವೇಶ : ಬಸವಜಯ ಮೃತ್ಯುಂಜಯ ಸ್ವಾಮೀಜಿ

ಗೋಕಾಕ:ರವಿವಾರಂದು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಗೋಕಾಕದಲ್ಲಿ ಬೃಹತ್ ಸಮಾವೇಶ : ಬಸವಜಯ ಮೃತ್ಯುಂಜಯ ಸ್ವಾಮೀಜಿ 

ರವಿವಾರಂದು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಗೋಕಾಕದಲ್ಲಿ ಬೃಹತ್ ಸಮಾವೇಶ : ಬಸವಜಯ ಮೃತ್ಯುಂಜಯ ಸ್ವಾಮೀಜಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 11 :

ರಾಜಕೀಯ ಕೇಂದ್ರವಾದ ಗೋಕಾಕ ನಗರದಲ್ಲಿ  ರವಿವಾರಂದು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಹಾಗೂ ಗೋಕಾಕ ತಾಲೂಕು ಘಟಕದ ವತಿಯಿಂದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಮಧ್ಯಾಹ್ನ 3 ಘಂಟೆಗೆ  ಲಿಂಗಾಯತ ಪಂಚಮಸಾಲಿ  ಸಮಾವೇಶ ಏರ್ಪಡಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶುಕ್ರವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಅಂತಿಮ ಹೋರಾಟವನ್ನು ಡಿಸೆಂಬರ್ 12 ರಂದು ಬೆಂಗಳೂರಿನ  ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಕೈಗೊಳ್ಳಲಾಗುತ್ತಿದ್ದು, ಈ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಗೋಕಾಕನಲ್ಲಿ  ನ 13 ರಂದು ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಗೋಕಾಕ ಸಮಾವೇಶ ಸೆಮಿಪೈನಲ್ ಇದ್ದಂತೆ ಇದಕ್ಕೆ ಸರಕಾರ ಎಚ್ಚರಗೊಳ್ಳದಿದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಜನ ಪಂಚಮಸಾಲಿಗಳನ್ನು ಸೇರಿದಂತೆ ಪೈನಲ್ ಸಮಾವೇಶ ನಡೆಸಿ ಸರಕಾರಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ನಾಲ್ಕು ಬಾರಿ ಮಾತು ಕೊಟ್ಟು ಮಾತಿಗೆ ತಪ್ಪಿದ್ದಾರೆ.  ಪದೇ ಪದೆ ಮಾತು ಕೊಟ್ಟು ನಂಬಿಕೆ ಹುಟ್ಟಿಸಿ ಹುಸಿ ಮಾಡುವುದು ಸರಿಯಲ್ಲ”, ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದಾಗ ನಮ್ಮ ಬೇಡಿಕೆ ಈಡೇರಬಹುದು ಎಂದು ಬಲವಾಗಿ ನಂಬಿದ್ದೆವು. ಅವರು ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಆಶೀರ್ವಾದ ಅವರ ಮೇಲಿದೆ. ಆದರೆ, ಮುಖ್ಯಮಂತ್ರಿಗಳು ಮಾತಿಗೆ ತಪ್ಪುತ್ತಿರುವುದು ಬೇಸರ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಡಿ. 2ನೇ ವಾರದಲ್ಲಿ ಬೆಂಗಳೂರಿನಲ್ಲಿ25 ಲಕ್ಷಕ್ಕೂ ಹೆಚ್ಚು ಜನ ಸೇರಿ ‘ಮೀಸಲಾತಿ ಪಡೆದೇ ಮಡಿವೆವು’ ಎಂಬ ಘೋಷಣೆಯೊಂದಿಗೆ ಅಂತಿಮ ಹೋರಾಟ ನಡೆಸಲಿದ್ದೇವೆ”ಎಂದು ಅವರು ಹೇಳಿದರು.
ಎಸ್.ಟಿ , ಎಸ್.ಸಿ ಸೇರಿದಂತೆ ಇತರ  ಸಮುದಾಯಕ್ಕೆ  ಮೀಸಲಾತಿ ಕೊಟ್ಟಂತೆ ನಮ್ಮ  ಸಮಾಜಕ್ಕೂ ಮೀಸಲಾತಿ  ಕೋಡಬೇಕು. ಸರಕಾರ ಇದಕ್ಕೆ ತಪ್ಪಿದರಿಂದಲೇ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮಟ್ಟದಲ್ಲಿ ಹೋರಾಟಗಳನ್ನು ಸಂಘಟಿಸುತ್ತಿದ್ದೇವೆ  ಹೋರಾಟಗಳ ಮುಖಾಂತರ ಸಮುದಾಯ ಜಾಗೃತಿ ಮೂಡಿದ್ದು, ಸಮಾಜಕ್ಕೆ 2 ಎ ಮೀಸಲಾತಿ ದೊರೆಯುವವರೆಗೆ ಹೋರಾಟ ಮುಂದೆವರೆಸಲಾಗುವುದು.
ಗೋಕಾಕ ನಗರದಲ್ಲಿ ಜರಗುವ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸವರಾಜ ಯತ್ನಾಳ, ಬೆಳಗಾವಿ ಗ್ರಾಮಾಂತರ ಶಾಶಕಿ ಲಕ್ಷ್ಮೀ ಹೆಬ್ಬಾಳಕರ, ರಾಜ್ಯಸಭಾ ಸದಸ್ಯ ಈರಣ್ಣಕಡಾಡಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದು, ಸಮಾವೇಶದಲ್ಲಿ 25 ಸಾವಿರ ಜನ ಸೇರಲ್ಲಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.

ನನ್ನ ಗಮನಕ್ಕೆ ಇಲ್ಲಾ : ವಿಜಯಪುರ ಶಾಸಕ ಬಸವರಾಜ ಯತ್ನಾಳ ಅವರು ಸತೀಶ ಜಾರಕಿಹೊಳಿ ಹೇಳಿಕೆಗೆ ಗೋಕಾಕಕ್ಕೆ ಬಂದು ಉತ್ತರ ನೀಡುತ್ತೇನೆ ಎಂದಿದ್ದಾರೆ, ಯತ್ನಾಳ ಅವರು ಸಮುದಾಯಕ್ಕೆ 2 ಎ ಮೀಸಲಾತಿ ಕೊಡಿಸಲು ಬರುತ್ತಿದ್ದಾರೋ ಅಥವಾ ಸತೀಶ ಜಾರಕಿಹೊಳಿ ಅವರಿಗೆ ಉತ್ತರ ನೀಡಲು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸವಜಯ ಮೃತ್ಯುಂಜಯ ಶ್ರೀಗಳು ಯತ್ನಾಳ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲಾ ಈಗಾಗಲೇ ಸತೀಶ ಅವರು ತಮ್ಮ ಹೇಳಿಕೆ ವಿಷಾದ ವ್ಯಕ್ತಪಡಿಸಿ ಹೇಳಿಕೆ ಹಿಂದೆ ಪಡೆದಿದ್ದಾರೆ ಹಾಗಾಗಿ  ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಉತ್ತರಿಸಿದರು. ತಾವು ಪಂಚಮಸಾಲಿ ಸುಮುದಾಯಕ್ಕೆ 2 ಎ ಮೀಸಲಾತಿ ಕೊಡಿಸಲು ಹೋರಾಟ ಮಾಡುತ್ತಿರುವಾಗ ತಮ್ಮ ಸಮುದಾಯದ ನಾಯಕರು ಹೋರಾಟದ ವೇದಿಕೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ  ಅವರು ಬಸವರಾಜ ಯತ್ನಾಳ ಅವರ ವಿಜಯಪುರದ ಜವಾರಿ ಭಾಷೆಯಲ್ಲಿ ಮಾತನಾಡುವದರಿಂದ ಅವರ ಮಾತುಗಳು ಎಲ್ಲರಿಗೂ ಖಾರ ವೆನಿಸುತ್ತವೆ ಎಂದು ನಯವಾಗಿ ಜಾರಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರುಗಳಾದ ಎಂ.ಸಿ  ಮಾಸ್ತಿಹೋಳಿ, ಡಾ. ರಮೇಶ  ಪಟಗುಂಡಿ, ಸೋಮಶೇಖರ್ ಮಗದುಮ್ಮ, ಶಿವಲಿಂಗಪ್ಪ ಸವದಿ, ಶಂಕರ ಗಿಡನ್ನವರ, ಬಸವರಾಜ ಹುಳ್ಳೇರ,  ಆನಂದ ಮೂಡಲಗಿ, ಈಶ್ವರ ಬಾಗೋಜಿ ಉಪಸ್ಥಿತರಿದ್ದರು

Related posts: