ಘಟಪ್ರಭಾ:ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ
ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ
ಘಟಪ್ರಭಾ ಅ 8: ಸಾಮಾಜಿಕ ಸಂಸ್ಥೆಗಳು ನಿರಂತರ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಇತ್ತೀಚಿಗೆ ಸ್ಥಳೀಯ ಡಿ.ಎಮ್.ಚೌಕಶಿ ಪೌಂಡೆಶನ ಹಾಗೂ ಸೋನಿ ಮ್ಯೂಜಿಕ್ ಕಲ್ಚರಲ್ ಅಕ್ಯಾಡೆಮಿ ಮತ್ತು ಟಿ.ವ್ಹಿ ಚಾನಲ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್.ಡಿ.ಟಿ ಕಾಲೇಜು ಮೈದಾನದಲ್ಲಿ ಎರಡು ದಿನಗಳಕಾಲ ಆಯೋಜಿಸಲಾದ ದಸರಾ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎರಡು ದಿನಗಳಕಾಲ ನಡೆದ ಸಾಂಸ್ಕಂತಿಕ ಕಾರ್ಯಕ್ರಮದಲ್ಲಿ ಅನೇಕ ಶಾಲೆಗಳ ಮಕ್ಕಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿದರು. ನಂತರ ಸೋನಿ ಮ್ಯೂಜಿಕ್ ಕಲ್ಚರಲ್ ಅಕ್ಯಾಡೆಮಿ ಮತ್ತು ಟಿ.ವ್ಹಿ ಚಾನಲ್ ಇವುಗಳ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಸ್ಥಳೀಯ ಆಕಾಶ ಜಿಮ್ ಇವರಿಂದ ಬಾಡಿ ಬಿಲ್ಡಿಂಗ ಶೋ ಜರುಗಿತು.
ಈ ಸಂದರ್ಭದಲ್ಲಿ ಶಿವುಕುಮಾರ ದೇವರು, ಡಿ.ಎಮ್.ಚೌಕಶಿ ಪೌಂಡೆಶನ ಅಧ್ಯಕ್ಷ ಶಿವಾನಂದ ಚೌಕಶಿ, ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡೆಪ್ಪಾ ತೋಳಿನವರ, ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ, ಸುದಾಕರ ದೇಶಪಾಂಡೆ, ಜಯಶೀಲ ಶೇಟ್ಟಿ, ಯಲ್ಲಾಲಿಂಗ ಚೌಕಶಿ, ನಾಗರಾಜ ಚೌಕಶಿ, ಮದಾರಸಾಬ ಜಗದಾಳ, ಡಾ.ಸಿ.ಎಂ.ಹರಗನ್ನವರ, ಹಣಮಂತ ಗಾಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.